Nammasullia: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಸುಳ್ಯ ಝೋನ್ ಇದರ ಪದಾಧಿಕಾರಿಗಳ ಆಯ್ಕೆ ಆ.9 ರಂದು ಸುಳ್ಯ ಗ್ರ್ಯಾಂಡ್ ಪರಿವಾರ್ ಹಾಲ್‌ನಲ್ಲಿ ನಡೆಯಿತು. ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಇದೊಂದು ರಾಜ್ಯ ಮಟ್ಟದ ಅಸೋಸಿಯೇಷನ್ ಆಗಿದ್ದು ದಕ್ಷಿಣ ಕನ್ನಡ, ಕಾಸರಗೋಡು, ಕೊಡುಗು, ಚಿಕ್ಕಮಗಳೂರು, ಹೀಗೆ ಸೇರಿದಂತೆ ಹದಿನೇಳು ಝೋನ್ ಗಳಿವೆ. ಈ ಅಸೋಸಿಯೇಷನ್’ನ ಮುಖ್ಯ ಉದ್ದೇಶವೆಂದರೆ ಕ್ರೀಡಾ ವಿಭಾಗದಲ್ಲಿ ಸಾಮರ್ಥ್ಯವಿದ್ದರು ಅವಕಾಶ ವಂಚಿತರಾದಂತಹ ಯುವ ಪ್ರತಿಭೆಗಳನ್ನು ಹೊರ ತರುವುದಾಗಿದೆ ಹಾಗೇ ಅವರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತ ಒಂದು ಸುಸಜ್ಜಿತ ವ್ಯವಸ್ಥೆ ನೀಡುವುದೇ ಇದರ ಮುಖ್ಯ ದ್ಯೇಯವಾಗಿದೆ.

ಈ ನಿಟ್ಟಿನಲ್ಲಿ ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ 2025-28 ನೇ ಸಾಲಿನ ಸುಳ್ಯ ಝೋನಲ್ ಪಧಾದಿಕಾರಿಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಫೈಝಲ್ ಕಟ್ಟೆಕ್ಕಾರ್, ಕಾರ್ಯದರ್ಶಿಯಾಗಿ ಮುನಾಫರ್ ಸುಳ್ಯ, ಕೋಶಾಧಿಕಾರಿ ಯಾಗಿ ಇಖ್ಬಾಲ್ ಸುಣ್ಣಮೂಲೆ ಹಾಗೂ ಹಲವು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
