ಸುಳ್ಯ: ಇಲ್ಲಿನ ಫುಟ್ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್‌ನ ದಶಮಾನೋತ್ಸವದ ಅಂಗವಾಗಿ, ಮುನಾಫರ್ ನೇತೃತ್ವದಲ್ಲಿ ಎರಡು ದಿನಗಳ ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಾಟ ಇದೇ ಬರುವ ದಿನಾಂಕ ನ.29,30 ರಂದು ನಡೆಯಲಿದೆ. ಇದರ ಹರಾಜು ಪ್ರಕ್ರಿಯೆಯು ನ.07 ರಂದು ಸುಳ್ಯದ ಉಡುಪಿ ಗಾರ್ಡನ್ ನಲ್ಲಿ ನಡೆಯಿತು. ಒಟ್ಟು ಎಂಟು ತಂಡಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮಗೆ ಬೇಕಾದ ತಂಡವನ್ನು ರಚಿಸಿದರು. ಹರಾಜಿನಲ್ಲಿ ಅತ್ಯಂತ ಅಧಿಕ ಮೊತ್ತಕ್ಕೆ ಶಾಹುಲ್ ಹಮೀದ್ (ಅಮ್ಮಿ ಪ್ರಗತಿ) ₹6500 ಕ್ಕೆ ಇಮಾರಾತ್ ಎಫ್‌ಸಿ ತಂಡದ ಪಾಲಾದರೆ, ಇನ್ನೋರ್ವ ಆಟಗಾರ ಅಪ್ಪಾದು ₹5300 ಕ್ಕೆ ಬೇಸ್ ಏಪ್‌ಸಿ ತಂಡದ ಪಾಲಾಯಿತು. ಕಾರ್ಯಕ್ರಮವನ್ನು ನಿಝಾರ್ ಶೈನ್ ನಿರೂಪಿಸಿದರು. ಅಚ್ಚು ಕಚ್ಚು, ಉರ್ಸಾನ್ ಜಿಂಜು, ಶಾಲೂ , ಸೆಬಾಸ್ಟಿಯನ್ ಮೊದಲಾದವರು ಸಹಕರಿಸಿದರು



