ಇಂದು ಉರೂಸ್ ಗೆ ಸಾಕ್ಷಿಯಾಗಲಿರುವ ಸಾವಿರಾರು ಮಂದಿ; ವಿವಿಧ ಕಡೆಗಳಿಂದ ಹರಿದು ಬರಲಿರುವ ಬೃಹತ್ ಸಂದಲ್(ಹೊರೆ ಕಾಣಿಕೆ)

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ತೆಕ್ಕಾರು ಮೂಡಡ್ಕ ಮಖಾಮ್ ಉರೂಸ್ ಗೆ ಇಂದು ಪ್ರೌಢ ಸಮಾಪ್ತಿ ದೊರಕಲಿದೆ.
ಕಳೆದ ಐದು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಗಳಿಗೆ ಇಂದು ರಾತ್ರಿ ತೆರೆ ಕಾಣಲಿದೆ.
ಇಂದು ಬೆಳಿಗ್ಗೆ ಹತ್ತು ಗಂಟೆಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಖತಮುಲ್ ಕುರ್-ಆನ್, ಸಂಜೆ ವೇಳೆ ಬೃಹತ್ ಸಂದಲ್ ಸ್ವೀಕಾರ ಕಾರ್ಯಕ್ರಮ ಮಗ್ರಿಬ್ ನಂತರ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸೆಯ್ಯದ್ ಮಶ್ಹೂದ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ.
ಖ್ಯಾತ ಪ್ರಭಾಷಣಗಾರ ಯಾಸಿನ್ ಜಹ್ವರಿ ಕೊಲ್ಲಮ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಸೆಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ರಾಜಕೀಯ ನಾಯಕರು ಉಲಮಾಗಳು ಬಾಗವಹಿಸಲಿದ್ದು ಸಾವಿರಾರು ಮಂದಿಗಳು ಬಾಗವಹಿಸುವ ನಿರೀಕ್ಷೆಯಿದೆ.
