ವಿಟ್ಲ ಕಸಬಾ ಗ್ರಾಮದ ಕಾಶಿಮಠದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವಿಟ್ಲ ಪೊಲೀಸರು ಉಕ್ಕುಡ ಕಡೆಯಿಂದ ವಿಟ್ಲದತ್ತ ಬರುತ್ತಿದ್ದ ಎರಡು ಲಾರಿಗಳಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ತಲಾ 500 ಕೆಂಪು ಕಲ್ಲುಗಳನ್ನು ಪತ್ತೆಹಚ್ಚಿದ್ದಾರೆ. 02-08-2025 ರಂದು ರಾಮಕೃಷ್ಣ ಪೊಲೀಸ್ ಉಪ ನಿರೀಕ್ಷಕರು ವಿಟ್ಲ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಮಧ್ಯಾಹ್ನ ಸಮಯ ಸದ್ರಿ‌ ಮಾರ್ಗವಾಗಿ, ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ    ಎರಡು ಲಾರಿಗಳು ಬರುತ್ತಿದ್ದನ್ನು ನೋಡಿ, ಅವುಗಳನ್ನು ನಿಲ್ಲಿಸಿ, ತಪಾಸಣೆ ನಡೆಸಲಾಗಿ ಅದರಲ್ಲಿ ಕೆಂಪು ಕಲ್ಲುಗಳಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆಯನ್ನು ಸದ್ರಿ ಲಾರಿಗಳ ಚಾಲಕರಲ್ಲಿ ಕೇಳಲಾಗಿ ಪರವಾನಿಗೆ ಇಲ್ಲವೆಂದು ಹಾಗೂ ನೇ ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು  ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 94/2025 ಕಲಂ: 303(2) ಬಿ ಎನ್ ಎಸ್ ಮತ್ತು 4(1) , 21 , MMRD act and U/s 3,44 KMMCR Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *