
ಸಂಪಾಜೆ ಕಾಂಗ್ರೆಸ್ ಪಕ್ಷದ ವಲಯ ಘಟಕದ ಸಭೆ ಅಧ್ಯಕ್ಷೆಯಾದ ಶ್ರೀಮತಿ ಲಲನ ಕೆ.ಆರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರು ಆದ ಶ್ರೀಮತಿ ಯಮುನಾ .ಬಿ.ಎಸ್ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ನಾನು ನಾಲ್ಕು ಜನ ತಿಳಿಯುವ ಮಟ್ಟಕ್ಕೆ ಬೆಳೆಯುವಂತಾಯಿತು ಎರಡು ಬಾರಿ ಪಂಚಾಯತ್ ಅಧ್ಯಕ್ಷೆ ಹಾಗೇ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಪಾಧ್ಯಕ್ಷರಾಗಲು ಅನುವು ಮಾಡಿಕೊಟ್ಟು ಸಂಪಾಜೆ ಗ್ರಾಮದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಲು ಆ ಮೂಲಕ ಸಾದ್ಯವಾಯಿತು. ಹಾಗೆಯೇ ಎಲ್ಲಾ ಮಹಿಳೆಯರು ಪಕ್ಷಕ್ಕಾಗಿ ದುಡಿದು ಮುಂದೆ ಬರಬೇಕು ಮುಂದೆ ಎಲ್ಲರೂ ಸೇರಿ ಒಂದೇ ಕುಟುಂಬದಂತೆ ಪಕ್ಷವನ್ನು ಕಟ್ಟೋಣ ಅದಕ್ಕಾಗಿ ಎಲ್ಲಾ ಮಹಿಳೆಯರನ್ನು ಕಾಂಗ್ರೆಸ್ ಜೊತೆ ಸೇರಿಸುವ ಪ್ರಯತ್ನ ಮಾಡೋಣ ಎಂದು ಕರೆಕೊಟ್ಟರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ ಮಾತನಾಡಿ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಕೊಟ್ಟ ಕೊಡುಗೆಗಳು ಮತ್ತು ಮಹಿಳೆಯರಿಗಾಗಿ ಸ್ವಾತಂತ್ರ್ಯಾ ಪೂರ್ವದಿಂದ ಮತ್ತು ನಂತರ ಜಾರಿಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು .ಹಿರಿಯ ನಾಯಕರು ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾದ ಮಹಮ್ಮದ್ ಕುಂಞಿ ಮಾತನಾಡಿ ಸಂಪಾಜೆಯಲ್ಲಿ ಅನೇಕರ ಹುನ್ನಾರಗಳ ಮಧ್ಯೆಯೂ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕೈಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಲುಕು ಹಾಕಿ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರಬೇಕಾದ ಅಗತ್ಯದ ಬಗ್ಗೆ ತಿಳಿಸಿದರು, ಶ್ರೀಮತಿ ಲಲನ ಕೆ.ಆರ್ ಅಧ್ಯಕ್ಷೀಯ ಭಾಷಣ ಮಾಡಿದರು, ಗ್ರಾಮ ಪಂಚಾಯತ್ ಸದಸ್ಯೆ ಮತ್ತು ಮಾಜೀ ಉಪಾಧ್ಯಕ್ಷರಾದ ಲೆಸ್ಸಿ ಮೊನಾಲಿಸಾ, ಹಾಗೂ ಕಾರ್ಯದರ್ಶಿ ಇಂದಿರಾವರು ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಂಪಾಜೆ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾದ ಫಿಲೋಮಿನಾ ಕ್ರಾಸ್ತ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಕೆರೋಲಿನಾ ವಂದಿಸಿದರು. ವಲಯ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ. ನಿರೂಪಿಸಿದರು ,ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಪ್ರಮಿಳಾ ಪೆಲ್ತಡ್ಕ ,ಬಾರತಿ, ಬೆನೆಡಿಕ್ಟ್ ಡಿಸೊಜ, ಎಪ್ಪಿ ವೇಗಸ್,ಸಾವಿತ್ರಿ ಕರಿಯಪ್ಪ, ಗಂಗಮ್ಮ, ಲೀಲ, ಸರಸ್ವತಿ, ಉಪಸ್ತಿತರಿದ್ದರು



