ಬೆಂಗಳೂರಿನಿಂದ ಸುಳ್ಯ ಕಡೆ ಬರುತ್ತಿದ್ದ ಸುಳ್ಯದ ಯುವಕರಿಗೆ ಬೇಕಾದ ಅಗತ್ಯ ವಸ್ತುಗಳು ಕಾರಿನಿಂದ ಕಳ್ಳತನವಾದ ಘಟನೆ ಆ.4 ರಂದು ರಾತ್ರಿ 11:00 ಸುಮಾರಿಗೆ ನಡೆದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಹೊರಟ ಯುವಕರು ತಮ್ಮ ಕಾರನ್ನು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮೈಸೂರು ರಸ್ತೆಯಲ್ಲಿರುವ ಹೋಟೆಲ್ ಮುಂಭಾಗ ಕಾರನ್ನು ನಿಲ್ಲಿಸಿ ಊಟಕ್ಕಾಗಿ ತೆರಳಿದ್ದಾರೆ. ಊಟ ಮುಗಿಸಿ ಹಿಂದಿರುಗುವಾಗ ಕಾರಿನ ಗಾಜನ್ನು ಒಡೆದು ಕಾರಿನಲ್ಲಿ ಇರಿಸಿದ್ದ ಬ್ಯಾಗು, ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಯುವಕರು ಪೊಲೀಸ್ ಹೆಲ್ಪ್ ಲೈನ್ ನಂಬರ್ 112 ಕರೆ ಮಾಡಿ ನಡೆದ ಘಟನೆಯನ್ನು ವಿವರಿದ್ದಾರೆ.
ತದನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ಸಲ್ಲಿಸಿ, ಮುಂದೆ ತಮ್ಮ ಫೋನ್ ಟ್ರ್ಯಾಕ್ ಮಾಡಿ ಮೊಬೈಲ್ ಇರುವ ಕಡೆ ಪತ್ತೆದಾರಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರ ತಂಡ ಕಳವು ಮಾಡಿದ ತಮ್ಮ ಬ್ಯಾಗ್ ಅಲ್ಲದೇ, ಇನ್ನೂ ಹಲವರ ಬ್ಯಾಗ್ ಹಾಗೂ ವಸ್ತುಗಳನ್ನು ಕಳ್ಳತನ ಮಾಡಿ ಮೈಸೂರು ರಸ್ತೆ ಬಸ್ ನಿಲ್ದಾಣದ ಒಂದು ಮೂಲೆಯಲ್ಲಿ ಇಟ್ಟಿರುವುದು ಗಮನಕ್ಕೆ ಬಂದಿದೆ, ಬ್ಯಾಗುಗಳನ್ನು ಕಂಡ ಯುವಕರು ತಕ್ಷಣ ಪೋಲಿಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ. ಅದೇ ಕಳ್ಳರು ಮೂರಕ್ಕಿಂತ ಹೆಚ್ಚು ಕಾರನ್ನು ಕಳ್ಳತನಮಾಡಿದ್ದು ಊರನ್ನು ಬಿಡುವ ಕೊನೆಯ ಗಳಿಗೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಆದರೆ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಒಂದು ಗಂಟೆಯ ಒಳಗಡೆ ಕಳವಾದ ಬ್ಯಾಗನ್ನು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಪತ್ತೆ ಹಚ್ಚುವಲ್ಲಿ ಸುಳ್ಯದ ಯುವಕರು ಯಶಸ್ವಿಯಾಗಿದ್ದಾರೆ.