ಸುಳ್ಯ ಮೊಗರ್ಪಣೆ ಅಡ್ಕ ನಿವಾಸಿ, SSF ಜಿಲ್ಲಾ ಮಾಜಿ ಕಾರ್ಯದರ್ಶಿ ಸೆಮೀರ್ ಎಚ್.ವೈ ಅವರ ತಂದೆ ಯೂಸುಫ್ ಅಡ್ಕ ಇದೀಗ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಯೂಸುಫ್ ರವರು ಹಳೇಗೇಟು ಖಲಿದಿಯಾ ಶಾ ಮಿಲ್ ನಲ್ಲಿ ಕಳೆದ 40 ವರ್ಷಗಳಿಂದ ಉದ್ಯೋಗಿಯಾಗಿದ್ದರು.
ಕಳೆದ ನಾಲೈದು ದಿನಗಳ ಹಿಂದೆ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ಮೃತರು ಪತ್ನಿ ಫಾತಿಮಾ, ಪುತ್ರರಾದ ಶಮೀರ್, ನಿಸಾರ್, ಪುತ್ರಿಯರಾದ ಸಮೀನಾ, ರಸೀನಾ, ಸಕೀನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.




