ಸುಳ್ಯ: ಜೈ ಭಾರತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಸುಳ್ಯ ಇದರ ವತಿಯಿಂದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಸಹಯೋಗದಲ್ಲಿ ಮೇ 25 (ನಾಳೆ) ಆದಿತ್ಯವಾರ ದಂದು ಸುಳ್ಯ ಉಡುಪಿ ಗಾರ್ಡನ್ ಪರಿವಾರಕಾನದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಲಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ರಕ್ತ ನಿಧಿಗಳಲ್ಲಿ ರಕ್ತದ ಅಭಾವ ಹೆಚ್ಚುತ್ತಿರುವ ಕಾರಣ ಈ ಶಿಬಿರ ಆಯೋಜಿಸಲಾಗಿದೆ, ಆದ್ದರಿಂದ ಎಲ್ಲಾ ಆರೋಗ್ಯ ವಂತ ಯುವಕರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ಜೀವ ಉಳಿಸುವ ಈ ಮಹತ್ತರ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.