
ಬೆಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಹಾಗೂ ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ) ವತಿಯಿಂದ ನಾರಾಯಣ ಆಸ್ಪತ್ರೆ ಬೆಂಗಳೂರು ಇದರ ಸಹಕಾರದೊಂದಿಗೆ ರಾಜಧಾನಿ ಬೆಂಗಳೂರಿನ ಗಾಂಧಿನಗರದಲ್ಲಿ ರಕ್ತದಾನ ಶಿಬಿರ ನಡೆಯಿತು.
🛒 Recommended for You:
ರಕ್ತದಾನ ಶಿಬಿರವನ್ನು ಬಹು ಜನಾಬ್ ಶಾಫಿ ಸಅದಿ ಮೆಜೆಸ್ಟಿಕ್ ಉದ್ಘಾಟಿಸಿದರು. ಬಿ.ಸಿ.ಸಿ ಅಧ್ಯಕ್ಷರಾದ ಶಬೀರ್ ಬ್ರೀಗೆಡ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬ್ಲಡ್ ಡೋನರ್ಸ್ ಇದರ ಉಪಾಧ್ಯಕ್ಷರಾದ ಅಶ್ರಫ್ ಉಪ್ಪಿನಂಗಡಿ ಮತ್ತು ಹಾರಿಸ್ ಜಿ.ಎಸ್.ಕೆ, ಸೆಲೀಂ ಸಿ.ಎಂ, ಸಿಹಾಬ್, ಸಂಶುದ್ದೀನ್ ಕುಕ್ಕಾಜೆ, ಪತ್ರಕರ್ತರಾದ ಇರ್ಷಾದ್ ವೇಣೂರು, ಹಾಗೂ ಬಿಡಿಎಂ ಕಾರ್ಯನಿರ್ವಾಹಕರಾದ ಬಶೀರ್ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವಾಝ್ ಟಿವಿ9 ಧನ್ಯವಾದ ಸಮರ್ಪಿಸಿದರು. ಇರ್ಫಾನ್ ಕಲ್ಲಡ್ಕ ನಿರೂಪಿಸಿದರು.
ಶಿಬಿರದಲ್ಲಿ ಐವತ್ತರಷ್ಟು ದಾನಿಗಳು ರಕ್ತದಾನ ಮಾಡಿ ಜೀವ ಉಳಿಸಿದರು.




