ಸುಳ್ಯದಲ್ಲಿ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅ.8 ರಂದು ನಡೆಯಿತು .ಅಧ್ಯಕ್ಷತೆಯನ್ನು ಹರೀಶ್ ನಾಯಕ್ ವಹಿಸಿದರು. ಸುಳ್ಯ ಉಪ ವಿಭಾಗ ಮಟ್ಟದ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಖೆಗಳಹಾಗೂ ಉಪ ವಿಭಾಗ ಮಟ್ಟದ ಮೆಸ್ಕಾಂ ಗ್ರಾಹಕರು ತಾವು ಅನುಭವಿಸುತ್ತಿರುವ ಬಹಳಷ್ಟು ಸಮಸ್ಯೆಗಳು,ಆಗಬೇಕಾದ ಕೆಲಸಗಳು ಹಾಗೂ ಸುರಕ್ಷಿತ ಬಗ್ಗೆ ಮೆಸ್ಕಾಂ ಸದಸ್ಯರುಅಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಸುಳ್ಯದಲ್ಲಿ 110 ಕೆವಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗ್ರಾಹಕರು ಸದಸ್ಯರು ತೀರ್ವ ಸಮಾಧಾನ ವ್ಯಕ್ತಪಡಿಸಿ ಲೈನ್ ಹಾದುಹೋಗುವ ಸಮಸ್ಯೆಯನ್ನು ಶಾಸಕರ ಮತ್ತು ಅರಣ್ಯ ಅಧಿಕಾರಿಗಳ ಉಪಸ್ಥಿತಿ ಯಲ್ಲಿ ಇನ್ನೊಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳು ಬೇಕೆಂದು ಸಭೆಯಲ್ಲಿ ಆಗ್ರಹಿಸಿದರು .
ಬೆಳ್ಳಾರೆ ಭಾಗದಲ್ಲಿ ಮತ್ತು ಅರಂತೋಡು ಲೈನ್ ಮ್ಯಾನ್ ಗಳ ಕೊರತೆ ಮತ್ತು ಶೀಘ್ರದಲ್ಲಿ ನೇಮಕಗೊಳಿಸಲು ಇಲಾಖೆಯವರು ಪ್ರಯತ್ನಿಸಿ ಲೈನ್ ಮ್ಯಾನ್ ಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಂದಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕೆಂದು ಇಬ್ರಾಹಿಂ ಅಂಬಟೆ ಗದ್ದೆ ಮತ್ತು ಜುಬೇರ್ ಅರಂತೋಡು ಆಗ್ರಹಿಸಿದರು ಆಲೆಟ್ಟಿ ಅರಂಬೂರು ಪ್ರದೇಶಗಳಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಾಯ ಹಾಗೂ ಸಮಸ್ಯೆಗಳ ಬಗ್ಗೆ ಸತ್ಯಕುಮಾರ್ ಅಡಿಂಜೆ ಮತ್ತು ಯೂಸುಫ್ ಅಂಜಿಕಾರ್ ಅಧಿಕಾರಿಗಳ ಗಮನಸೆಳೆದರು.
ಮೆಸ್ಕಾಂ ನವರು ಗ್ರಾಹಕರ ಮೀಟರ್ ಕೆಟ್ಟೋಗಿ ತುಂಬಾ ಸಮಯವಾದರೂ ಬದಲಾವಣೆ ಮಾಡದೆ ಇದ್ದುದನ್ನು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಸತ್ಯ ಕುಮಾರ್ ಆಡಿಂಜೆ ಅಧಿಕಾರಿಗಳಲ್ಲಿ ತಿಳಿಸಿದರು.
ತೊಡಿಕಾನ ಮಾರ್ಗದ ಬದಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಇರುವ ಮರದ ಕೊಂಬೆಗಳನ್ನ ತೆಗೆಯುವಂತೆ ರಾಧಾಕೃಷ್ಣ ಪಾರೆಮಾಜಲು ಮತ್ತು ಚೈತ್ರ ತೊಡಿಕಾನ ಅಗ್ರಹಿಸಿದರು.ವಾಲಿದ ಮತ್ತು ಹಳೆ ಕಂಬ ಬದಲಾವಣೆಯಲ್ಲಿ ಹೆಚ್ಚು ಹಣವನ್ನು ಪಡೆಯುವ ಗುತ್ತಿಗೆದಾರರ ಬಗ್ಗೆ ಆರ್.ಬಿ ಬಶೀರ್ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ತಂತಿಗಳು ಹಾದು ಹೋಗಿರುವ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮರದ ಕೊಂಬೆಗಳ ಕಟಿಂಗ್ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಕೂಡಲೇ ಟ್ರಿ ಕಟಿಂಗ್ ಮಾಡುವಂತೆ ಆರ್ ಬಿ ಬಶೀರ್ ಮತ್ತು ನಂದರಾಜ್ ಸಂಕೇಶ್ ಅಗ್ರಹಿಸಿದರು.ಅರಣ್ಯ ಅಧಿಕಾರಿಗಳು ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಕೆಳಗೆ ಗಿಡ ವನ್ನು ನೆಡುವುದರಿಂದ ಅದು ಎರಡು ವರ್ಷ ಆಗುವಾಗ ವಿದ್ಯುತ್ ತಂತಿಗಳು ತಾಗುತ್ತದೆ.ಅದನ್ನು ಕಡಿಯಲು ಅರಣ್ಯ ಅಧಿಕಾರಿಗಳು ಬಿಡುವು ದಿಲ್ಲ ಇದರ ಬಗ್ಗೆ ಮೇಲಧಿಕಾರಿ ಗಳಿಗೆ ತಿಳಿಸಲು ತಾಜುದ್ದೀನ್ ಅರಂತೋಡು ಆಗ್ರಹಿಸಿದರು.
ಸಭೆಯಲ್ಲಿ ಸುಳ್ಯ ತಾಲ್ಲೂಕು ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತ ಮೊಟ್ಟೆ, ಮಧುಕರ ಬುಡ್ಲೆಗುತ್ತು ,ತಾಜುದ್ದೀನ್ ಅರಂತೋಡು,ಅಬೂಬಕ್ಕರ್ ಅರಫಾ, ಉಷಾ ಗಂಗಾಧರ್,ಸುಮತಿ ಹುಲಿಮನೆ ,ನಳಿನಿ ತಡಕಜೆ ,ಮೆಸ್ಕಾಂ ಶಾಖೆಗಳ ಜೆ ಇ ಯವರು ಮತ್ತು ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಉಪಸ್ತಿದ್ದರು.ಅರಂತೋಡು ಜೆ ಇ ಅಭಿಷೇಕ್ ಸ್ವಾಗತಿಸಿ ,ವಂದಿಸಿದರು.

Leave a Reply

Your email address will not be published. Required fields are marked *