ಕಡಲ ನಗರಿ ಮಂಗಳೂರು (Mangalore) ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ. ಜಗತ್ತಿನಲ್ಲೇ ಸುರಕ್ಷಿತ ನಗರಗಳ(safe city) ಪೈಕಿ ದೇಶದಲ್ಲಿ ಮಂಗಳೂರು ನಗರ ಮೊದಲನೇ ಸ್ಥಾನ (number one) ಮತ್ತು ವಿಶ್ವದಲ್ಲಿ 49 ನೇ ಸ್ಥಾನ ಪಡೆದಿದೆ.

“ನಂಬಿಯೋ’ ತನ್ನ 2025ರ ವರ್ಷದ ಮಧ್ಯ ಭಾಗದ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಮಂಗಳೂರು ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.
🛒 Recommended for You:
ಸುರಕ್ಷಿತ ನಗರಗಳ ವಿಭಾಗದಲ್ಲಿ ವಿಶ್ವದ ಒಟ್ಟು 393 ನಗರದ ಪಟ್ಟಿ ರಿಲೀಸ್ ಮಾಡಲಾಗಿದ್ದು,ಭಾರತದ 23 ನಗರ ಈ ಲಿಸ್ಟ್ ನಲ್ಲಿದೆ. ಮಂಗಳೂರು ನಗರ ಶೇ.74.2 ಅಂಕದೊಂದಿಗೆ 49ನೇ ಸ್ಥಾನ, ವಡೋದರ 85 ನೇ ಸ್ಥಾನ, ಅಹಮದಾಬಾದ್ 93 ನೇ ಸ್ಥಾನ ಪಡೆದಿದೆ.
ಪರಿಸರ ಸಂರಕ್ಷಣೆ, ನಗರ ನಿರ್ವಹಣೆ ಸೇರಿದಂತೆ ವಿವಿಧ ಪ್ಯಾರಾಮೀಟರ್ ಗಳನ್ನು ಪರಿಗಣಿಸಿ ಶ್ರೇಯಾoಕವನ್ನು ಘೋಷಿಸಲಾಗಿದೆ. ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ಕೊಟ್ಟ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.




