
ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ, ನಾಳೆ (ಮೇ 26, ಮಂಗಳವಾರ) ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರುಗಳಾದ ಸುಳ್ಯ-1, ಕೇರ್ಪಳ, ಡಿಪೋ, ತೊಡಿಕಾನ, ಕೊಲ್ಲಾರ್, ಉಬರಡ್ಕ ಮತ್ತು ಕಲ್ಲುಗುಂಡಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪಬ್ಲಿಕ್ ರಿಯಾಕ್ಷನ್ (ಜನರ ಮಾತು):
ವಿದ್ಯುತ್ ಕಡಿತದ ಈ ಪ್ರಕಟಣೆಗೆ ಸುಳ್ಯದ ಜನತೆ ತೀಕ್ಷ್ಣವಾಗಿ ಹಾಗೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, “ಸುಳ್ಯದಲ್ಲಿ ಕರೆಂಟ್ ಇಲ್ಲ ಅಂತ ದಯವಿಟ್ಟು ಪ್ರಕಟನೆ ಮಾಡಬೇಡಿ ಸಾರ್, ಯಾಕಂದ್ರೆ ಇಲ್ಲಿ ದಿನಾ ಕರೆಂಟ್ ಇರೋದೇ ಇಲ್ಲ! ಬದಲಾಗಿ, ‘ಯಾವ ದಿನ ಸುಳ್ಯದಲ್ಲಿ ಇಡೀ ದಿನ ಕರೆಂಟ್ ಇರುತ್ತದೆ’ ಅಂತ ಹಾಕಿ,
ಇಂತಹ ಬ್ರೇಕಿಂಗ್ ನ್ಯೂಸ್ ಹಾಕಿ, ನಾವೂ ಸ್ವಲ್ಪ ಖುಷಿಪಡ್ತೀವಿ!” ಎಂದು ಸಾರ್ವಜನಿಕರು ಕಾಲೆಳೆದಿದ್ದಾರೆ. 💡🔌😅







