ನಮ್ಮ ಶರೀರದ ಅತ್ಯಂತ ಅಮೂಲ್ಯ ಮತ್ತು ಅತೀ ಬೆಲೆ ಬಾಳುವ ಅಂಗವಾಗಿದೆ. ಹೃದಯ.ಅದು ಅತಿ ಸೂಕ್ಷ್ಮವಾದ ಅಂಗವಾಗಿದ್ದರಿಂದಲೇ ಅದರ ಸಂರಕ್ಷಣೆ ಕೂಡ ಅಷ್ಟೇ ಅಗತ್ಯವಾಗಿದೆ.ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಹಠಾತ್ ಹೃದಯಾಘಾತವು ದಿನದಿಂದ ದಿನಕ್ಕೆ ಕನಿಷ್ಠ ಎರಡರಂತೆ ಸಂಭವಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅಧ್ಯಯನಗಳು ಹಾಗೂ ತಜ್ಞರು ಹೇಳಿಕೆಯನ್ನು ನೀಡಿರುತ್ತಾರೆ. ಮೊದಲನೆಯದಾಗಿ ನಾವು ನೋಡಬೇಕಾಗಿದ್ದು ಹಠಾತ್ ಹೃದಯಾಘಾತಕ್ಕೆ ಮುಖ್ಯ ಕಾರಣವೇನು ಎಂಬುದಾಗಿದೆ. 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ವರದಿಯೊಂದರ ಪ್ರಕಾರ ವಿಶ್ವದಲ್ಲಿ ಹೃದಯ ಸಂಬಂಧಿ ಕಾಯಿಲೆಗಳೇ ಸಾವಿಗೆ ಕಾರಣವಾಗುವಲ್ಲಿ ಅಗ್ರಗಣ್ಯವಾಗಿದೆ. ಪ್ರತಿ ವರ್ಷ 1.77 ಕೋಟಿ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಠಾತ್ ಹೃದಯಾಘಾತಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿಯಾಗಿದ್ದು,ಅತಿಯಾದ ಕೊಬ್ಬು ,ತೀವ್ರ ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನಿಜವಾಗಿ ಹೃದಯಘಾತಕ್ಕೆ ಮುಖ್ಯ ಕಾರಣ ತಜ್ಞರು ಹೇಳುವಂತೆ ನಮ್ಮ ಜೀವನ ಶೈಲಿಯಾಗಿದೆ. ಅಧುನಿಕ ತಂತ್ರಜ್ಞಾನ ಯುಗದಲ್ಲಿ ಮಿತಿಮೀರಿದ ಮೊಬೈಲ್ ಬಳಕೆ ಮಾಡುವುದರಿಂದ ಅದರ ರೇಡಿಯೇಷನ್ ಕಾರಣ, ವಿಪರೀತ ಜಂಕ್ ಫುಡ್ ಸೇವನೆ, ನಿದ್ದೆಯ ಕೊರತೆಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ. ಮತ್ತೊಂದು ವರದಿ ನೋಡುವುದಾದರೆ ಭಾರತೀಯ ವೇದಿಕೆಯ ಸಂಶೋಧನಾ ಮಂಡಳಿ 2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ 25ರಿಂದ45 ವಯಸ್ಸಿನ ಮಧ್ಯೆ ಹೆಚ್ಚು ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿದ್ದು, ಇದಕ್ಕೆ ಕಾರಣ ಧೂಮಪಾನ, ಮಧ್ಯಪಾನ, ಕಡಿಮೆ ವ್ಯಾಯಾಮ, ತೀವ್ರ ದಣಿವು ಮುಂತಾದವುಗಳಾಗಿವೆ.
ಹೃದಯಾಘಾತಕ್ಕೆ ಮೊದಲು ಕಾಣುವ ಸಾಮಾನ್ಯ ಲಕ್ಷಣವೆಂದರೆ ವಿಪರೀತ ತಲೆನೋವು,ಉಸಿರಾಟ ತೊಂದರೆ ಮಾತ್ರವಲ್ಲ ವಿಪರೀತ ಮಟ್ಟದ ಮಧುಮೇಹ ,ಸಕ್ಕರೆ ಕಾಯಿಲೆ ಮುಂತಾದವುಗಳ ಹೆಚ್ಚಳದಿಂದ ಕೂಡ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ.ಆದುದರಿಂದ ನಮ್ಮ ಆರೋಗ್ಯದ ಮೇಲೆ ನಾವೇ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮತ್ತೊಂದು ಮುಖ್ಯ ಕಾರಣವೇನು ಎಂದರೆ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಹೇಳುವಂತೆ ನಮ್ಮ ವಾತಾವರಣದ ಮಾಲಿನ್ಯ ಗಳಾಗಿದ್ದು ಮಾಲಿನ್ಯಗಳಾಗಿದ್ದು ಅದರಲ್ಲೂ ಪ್ಲಾಸ್ಟಿಕ್ ಬಳಕೆ,ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳು ಸೇರಿದಂತೆ, ನಗರ ಪ್ರದೇಶದ ವಾತಾವರಣದಲ್ಲಿ ಮಾಲಿನ್ಯ ಹೆಚಾಗಿರುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು ಶೇಕಡ 28 ರಷ್ಟು ನಗರಗಳಲ್ಲಿ ಮತ್ತು ಶೇಕಡಾ 17 ರಷ್ಟು ಗ್ರಾಮೀಣ ಪ್ರದೇಶದಲ್ಲಿ ಆಗಿದೆ ಪತ್ತೆಯಾಗಿದೆ.ಇದರಿಂದ ನಾವು ರಕ್ಷಣೆ ಪಡೆಬೇಕಾದರೆ ಮೊದಲ ಉತ್ತಮವಾದ ವಾತಾವರಣ ಸೃಷ್ಟಿಸಿ ಕೃಷಿ, ಅರಣ್ಯೀಕರಣಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ಉತ್ತಮ ಶುದ್ಧ ಗಾಳಿಯನ್ನು ಪಡೆಯಬೇಕು ಆಗ ಮಾತ್ರ ಸಂತೋಷದ ಜೀವನ ನಡೆಸಲು ಸಾಧ್ಯ. ರಾಜ್ಯದಲ್ಲಿ ಈಗಾಗಲೇ ಸರ್ಕಾರವು ಶಾಲಾ-ಕಾಲೇಜಿನ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮತ್ತು ರೈಲ್ವೆ ಮತ್ತು ಬಸ್ ನಿಲ್ದಾಣದಲ್ಲೂ ತಪಾಸಣೆ ನಡೆಸಲು ಆದೇಶ ಹೊರಡಿಸಿದೆ.
ಇತ್ತೀಚಿಗೆ ರಾಜ್ಯ ಸರ್ಕಾರಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರನಾಥ್ ರವರ ನೇತೃತ್ವದ 12 ಜನರ ತಂಡ ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ.250 ಜನರ ಮೇಲೆ ಆ ತಂಡ ಅಧ್ಯಯನ ನಡೆಸಿದ್ದು ,ಶೇಕಡಾ 98 ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಅದರಲ್ಲಿಯೂ ಮಧುಮೇಹ, ರಕ್ತದೊತ್ತಡ, ಧೂಮಪಾನ, ಬೊಜ್ಜು ಮುಂತಾದ ಕಾಯಿಲೆಯಿಂದ ಬಳಲುವವರು ಇದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದು ಅಲ್ಲದೆ ಕೆಲವರು ಪ್ರಕಾರ ಕೋವಿಡ್ 19 ಲಸಿಕೆ ಪಡೆದವರಲ್ಲಿ ಮಾತ್ರ ಹೃದಯಾಘಾತ ಕಾಣುತ್ತದೆ ಎಂಬ ವರದಿಯನ್ನು ಈಗಾಗಲೇ ತಜ್ಞರು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ತಳ್ಳಿ ಹಾಕಿದೆ. ಈ ರೀತಿ ಹಲವಾರು ವರದಿಗಳು ಬರುತ್ತಿವೆ. ಆದರೆ ದುರಾದೃಷ್ಟವಶಾತ್ ನಾವು ಮಾತ್ರ ನಮ್ಮದೇ ಆದ ಜೀವನ ಶೈಲಿಯಲ್ಲಿ ಮುನ್ನಡೆಯುತ್ತಿದ್ದೇವೆ. ತಜ್ಞರು ಹೇಳುವಂತೆ ದಿನನಿತ್ಯ ಏಳು ಗಂಟೆಯಿಂದ ಎಂಟು ಗಂಟೆಯವರೆಗೆ ವ್ಯಾಯಾಮ, ಉತ್ತಮ ಆಹಾರ ಪದ್ಧತಿ, ಆಗಿಂದಾಗ್ಗೆ ಆರೋಗ್ಯ ಪರೀಕ್ಷೆ ಮಾಡಿಸುವುದು ಮುಂತಾದವುಗಳಿಂದ ನಮಗೆ ಬರಬಹುದಾದ ಹೃದಯ ಸಂಬಂಧಿ ಕಾಯಿಲೆಯ ಸಾಧ್ಯತೆಯನ್ನು ತಗ್ಗಿಸಬಹುದು. ಆದುದರಿಂದ ನಮ್ಮ ಆರೋಗ್ಯದ ಮೇಲೆ ನಾವೇ ಹೆಚ್ಚಿನ ಗಮನವನ್ನು ಹರಿಸಬೇಕಾಗಿದೆ. ಆರೋಗ್ಯವೇ ಭಾಗ್ಯ

ಆಶಿಕ್ ಕೊಡಗು
ಅಂತಿಮ ಪದವಿ ವಿದ್ಯಾರ್ಥಿ
ಶಂಸುಲ್ ಉಲಮಾ ಅರೇಬಿಕ್ ಕಾಲೇಜು ತೋಡಾರು

Leave a Reply

Your email address will not be published. Required fields are marked *