Nammasullia: ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ, ಕೇವಲ 8 ದಿನದ ಮಗುವನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಯ ವೆಂಟಿಲೇಟರ್ ಆ್ಯಂಬ್ಯುಲೆನ್ಸ್ ಮೂಲಕ ಕೇರಳದ ಕೊಚ್ಚಿ ಅಮೃತಾ ಆಸ್ಪತ್ರೆಗೆ ಸಾಗಲಿದೆ.
ಹೃದ್ರೋಗ ಸಂಬಂಧಿಸಿದಂತೆ ಈ ಮಗುವನ್ನು ತುರ್ತಾಗಿ ಕೇರಳಕ್ಕೆ 4 ಗಂಟೆಯ ಒಳಗಾಗಿ ಸಾಗಿಸಬೇಕಾಗಿದೆ. ಕೆ.ವಿ.ಜಿ ಆಸ್ಪತ್ರೆಯ ಆ್ಯಂಬ್ಯುಲೆನ್ಸ್’ನಲ್ಲಿ ಚಾಲಕ ಹನೀಫ್ ಜಯನಗರ, ಟೆಕ್ನೀಶಿಯನ್ ತಮೀಮ್ ಸುಳ್ಯ, ಸಹಚಾಲಕರಾಗಿ ತಾಜುದ್ದೀನ್ ಟರ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ ತಲಪಾಡಿ ಗಡಿಯವರೆಗೆ ಮಂಗಳೂರಿನ ನಾಗರಿಕರು ಸಹಕರಿಸಿ,
ಕೇರಳ ಗಡಿಯಿಂದ ಕೊಚ್ಚಿಯ ವರೆಗೆ ಕೇರಳ ಪೊಲೀಸ್ ಇಲಾಖೆ ಹಾಗೂ ಆ್ಯಂಬ್ಯುಲೆನ್ಸ್ ಸಹಕಾರಿಸಲಿದ್ದಾರೆ ಎಂದು ತಿಳಿದು ಬಂದಿದೆ.