ದುಬಾರೆ, ಮೇ 18: ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಆಗಮಿಸಿದ್ದ ಚೆನ್ನೈ ಪಲ್ಲಾವರಂ ಮೂಲದ ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ದಾರುಣ ಘಟನೆ ನಡೆದಿದೆ. ಆನೆಗಳಿಗೆ ಸ್ನಾನ ಮಾಡಿಸುವ (ಎಲಿಫೆಂಟ್ ಬಾತಿಂಗ್) ಪ್ರಕ್ರಿಯೆ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

​ಆನೆ ಸ್ನಾನದ ವೇಳೆ ಎರಡು ಸಾಕಾನೆಗಳ ನಡುವೆ ಏಕಾಏಕಿ ಕಾದಾಟ ಶುರುವಾಗಿದೆ. ಆನೆಗಳು ಕಾದಾಡುತ್ತಿರುವಾಗ ನಿಯಂತ್ರಣ ತಪ್ಪಿದ ಆನೆಯೊಂದು ಪ್ರವಾಸಿ ಮಹಿಳೆಯ ಮೈಮೇಲೆ ಬಿದ್ದಿದೆ. ಪರಿಣಾಮ, ಭಾರಿ ಗಾತ್ರದ ಆನೆಯ ಅಡಿ ಸಿಲುಕಿದ ಚೆನ್ನೈನ ಪಲ್ಲಾವರಂ ಮೂಲದ ಜಿನ್ನು (33) ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಮೃತ ಮಹಿಳೆಯ ಪತಿ ಜೋಯಲ್ ಅವರಿಗೂ ಗಂಭೀರ ಗಾಯಗಳಾಗಿವೆ.

Leave a Reply

Your email address will not be published. Required fields are marked *