1976 ರಲ್ಲಿ ಸ್ಥಾಪನೆಗೊಂಡ ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ನ 50 ನೇ ವಾರ್ಷಿಕ ಸುವರ್ಣ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಮಸ್ತ ಜಂಇತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೊಯ ತಂಙಳ್ ರವರು ಜೂ. 9 ರಂದು ಅರಂತೋಡಿನಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಖತೀಬರಾದ ಆಸಿಫ್ ಅಝ್ಹರಿ, ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಅನ್ವಾರುಲ್ ಹುಧಾ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ , ಜಮಾಅತ್ ಕಾರ್ಯದರ್ಶಿ ಕೆ.ಎಮ್ ಮೂಸಾನ್, ಕೋಶಾಧಿಕಾರಿ ಅಬೂಬಕ್ಕರ್ ಪಾರೆಕ್ಕಲ್, ಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಷ ಕೆ.ಎಂ ಮುಸ್ತಫ, ಹಮೀದ್ ಹಾಜಿ ಸುಳ್ಯ, ನ್ಯಾಯವಾದಿ ಮೂಸ ಪೈಂಬಚ್ಚಾಲ್, ಇಬ್ರಾಹಿಂ ಹಾಜಿ ಕತ್ತರ್, ಡಿಗ್ನಿಟಿ ಗೋಲ್ಡ್ ಮಾಲಕ ಬಾತಿಶ ಕನಕಮಜಲು, ಬದುರುದ್ದೀನ್ ಪಠೇಲ್, ಸೈಫುದ್ಧೀನ್ ಪಠೇಲ್, ಹಾಜಿ ಕೆ.ಎಂ. ಮಹ್ಮದ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಅಸೋಸಿಯೇಶನ್ ಉಪಾಧ್ಯಕ್ಷ ಹಾಜಿ ಅಝಾರುದ್ಧೀನ್, ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ ಕಾರ್ಯದರ್ಶಿ ಪಸೀಲು ಸ್ವಲಾತ್ ಕಮಿಟಿ ಅಧ್ಯಕ್ಷ ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಮುಜೀಬ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *