ಜೂನ್ 10 ರಂದು ಸಂಜೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ರಸ್ತೆಯ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಒಂದು ಸ್ಕೂಟಿಯು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ ಸುಳ್ಯದ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಅವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಅದೇ ರಸ್ತೆಯಾಗಿ ಬಂದ ಸ್ಕೂಟಿಯೊಂದು ಅವರಿಗೆ ಬಲವಾಗಿ ಢಿಕ್ಕಿ ಹೊಡೆದಿದಢಿಕ್ಕಿಯ ರಭಸಕ್ಕೆ ಸುಬ್ರಹ್ಮಣ್ಯ ಅವರು ರಸ್ತೆಗೆ ಬಿದ್ದಿದ್ದು, ಈ ವೇಳೆ ಅವರ ತಲೆ ಕಾಂಕ್ರೀಟ್ ರಸ್ತೆಗೆ ಬಲವಾಗಿ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಅವರ ಕಿವಿಯಿಂದ ತೀವ್ರ ರಕ್ತಸ್ರಾವ ಆರಂಭವಾಗಿತ್ತು .ಅಪಘಾತ ನಡೆದ ತಕ್ಷಣ ಸ್ಥಳೀಯರು ತಕ್ಷಣವೇ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿದರು ಆದರೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಂದೇ ರಾತ್ರಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಮೆದುಳು ನಿಷ್ಕ್ರಿಯ ಗೊಂಡಿದ್ದ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಇಂದು ತರಲಾಗಿತ್ತು. ಇದೀಗ ಸಿ.ಎ. ಸುಬ್ರಹ್ಮಣ್ಯ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.








