
ಅರಂತೋಡು: ಇಲ್ಲಿನ ಬದ್ರಿಯಾ ಜುಮಾ ಮಸೀದಿಯ ಖಬರ್ ಸ್ಥಾನಕ್ಕೆ ಮರ್ ಹೂಂ ಹಾಜಿ ಅಹಮ್ಮದ್ ಕುಂಞಿ ಪಟೇಲ್ ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಅಳವಡಿಸಿದ ಸೋಲಾರ್ ದೀಪಗಳ ವ್ಯವಸ್ಥೆಯನ್ನು ಬಹು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ರವರು ಲೋಕಾರ್ಪಣೆಗೊಳಿಸಿದರು. ದೀಪಗಳನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಿದ ಬಳಿಕ ಅವರು ವಿಶೇಷ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರ (ಸಚಿವ ದರ್ಜೆ) ಟಿ. ಎಂ. ಶಾಹಿದ್ ತೆಕ್ಕಿಲ್ ಹಾಗೂ ಹಿರಿಯರಾದ ಹಾಜಿ ಅಬ್ದುಲ್ ಖಾದರ್ ಪಟೇಲ್ ಉಪಸ್ಥಿತರಿದ್ದರು.
ಮರ್ ಹೂಂ ಪಟೇಲರ ಮಕ್ಕಳಾದ ಹಾಜಿ ಬದ್ರುದ್ದಿನ್ ಪಟೇಲ್, ಸೈಫುದ್ದಿನ್ ಪಟೇಲ್, ಹಬೀಬ್ ಪಟೇಲ್, ಸಲಹುದ್ದಿನ್ ಪಟೇಲ್, ಜಲಾಲುದ್ದಿನ್ ಪಟೇಲ್ ಮತ್ತು ಅತಾಉಲ್ಲಾ ಅಝ್ ಹರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಉಪಾಧ್ಯಕ್ಷ ಹಾಜಿ ಕೆ. ಎಂ. ಮೊಹಮ್ಮದ್, ಪ್ರಮುಖರಾದ ಅಮೀರ್ ಕುಕ್ಕುಂಬಳ, ಕೆ. ಎಸ್. ಇಬ್ರಾಹಿಂ ಕುಕ್ಕುಂಬಳ, ಸಿದ್ದಿಕ್ ಮಾಂಬ್ಳಿ ಸೇರಿದಂತೆ ಊರಿನ ಪ್ರಮುಖರು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.







