ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ವತಿಯಿಂದ ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ರಾಜು ಎಂಬವರಿಗೆ ವಾಕರ್ ಕೊಡುಗೆಯಾಗಿ ನೀಡಿದರು. ಮನೆಯಲ್ಲಿ ಬಿದ್ದು ಸೊಂಟಕ್ಕೆ ಗಂಭೀರ ಗಾಯಗೊಂಡ ರಾಜು ರವರನ್ನು ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ಅಂಬುಲನ್ಸ್ ನಲ್ಲಿ ಉಚಿತವಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಮಾಹಿತಿಯಂತೆ ರಾಜುರವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಅವರು ನಡೆದಾಡಲು ಪ್ರಯತ್ನ ಪಡಬೇಕೆಂಬ ಸೂಚಿಸಿದ್ದರಿಂದ ಅವರಿಗೆ ನಡೆದಾಡಲು ಸಹಾಯವೆಂಬತೆ ವಾಕರ್ ಉಚಿತವಾಗಿ ನೀಡಲಾಯಿತು

Leave a Reply

Your email address will not be published. Required fields are marked *