Screenshot 2024 0703 123508Screenshot 2024 0703 123508

ಬರೋಬ್ಬರಿ 2 ಕೋಟಿ ಲೈಕ್ಸ್ ಬಾಚಿದ ಚೀಕು.!

ಟಿ 20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ತಂಡ ಭಾರತೀಯರ ಮನಸನ್ನು ಗೆದ್ದಿದೆ. ಗೆಲುವಿನ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿವೆ. ಇದರ ನಡುವೆ ಕಿಂಗ್ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದ್ದು, ಮತ್ತೊಂದು ದಾಖಲೆ ಬರೆದಿದೆ. ಟಿ 20 ವಿಶ್ವಕಪ್ ಗೆಲುವಿನ ನಂತರ ಕ್ರಿಕೆಟಿಗೆ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಚಿತ್ರವಾಗಿ ದಾಖಲೆ ಬರೆದಿದೆ. ಈ ಹಿಂದೆ ಬಾಲಿವುಡ್ ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ಫೋಟೋ ಅತಿ ಹೆಚ್ಚು ಲೈಕ್ ಪಡೆದ ಚಿತ್ರವಾಗಿ ದಾಖಲೆ ಹೊಂದಿತ್ತು.

ಈ ದಾಖಲೆಯನ್ನು ವಿರಾಟ್ ಮುರಿದಿದ್ದಾರೆ. ಬಾಲಿವುಡ್‌ನ ಸೂಪರ್ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ರಾಜಸ್ಥಾನದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಒಂದು ವರ್ಷದವರೆಗೆ ಹೆಚ್ಚು ಇಷ್ಟಪಟ್ಟ ಇನ್‌ಸ್ಟಾಗ್ರಾಮ್ ಪೋಸ್ಟ್ ಅವರ ಮದುವೆಯ ಫೋಟೋವೆ. ಆದರೆ, ಭಾರತವು ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದ ನಂತರ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ತಮ್ಮ ಪೋಸ್ಟ್‌ನೊಂದಿಗೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಗೆಲುವಿನೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಟೀಂ ಇಂಡಿಯಾ ಜೂನ್ 29 ರಂದು ಟ್ರೋಫಿಯನ್ನು ಗೆದ್ದದ್ದು ಮಾತ್ರವಲ್ಲ, ವಿಜಯವನ್ನು ಆಚರಿಸುವ ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಚಿತ್ರವಾಗಿದೆ. ಫೋಟೋ ಹಂಚಿಕೊಂಡ ಒಂದು ದಿನದಲ್ಲಿ ಈ ಸುದ್ದಿಯನ್ನು ಬರೆಯುವ ವೇಳೆ ಬರೋಬ್ಬರಿ 20 ಮಿಲಿಯನ್ (2ಕೋಟಿ) ಲೈಕ್‌ಗಳನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿತ್ತು. ಈ ಜೋಡಿ ಹಂಚಿಕೊಂಡಿದ್ದ ಮದುವೆಯ ಫೋಟೋಗೆ 16.2 ಮಿಲಿಯನ್ ಲೈಕ್ ಬಂದಿತ್ತು. ಬರೋಬ್ಬರಿ 2 ಲಕ್ಷದ 12 ಸಾವಿರ ಮಂದಿ ಕಾಮೆಂಟ್ ಮಾಡಿದ್ದರು. ವಿರಾಟ್ ಕೊಹ್ಲಿ ಫೋಟೋಗೆ 19. 1 ಮಿಲಿಯನ್ ಲೈಕ್‌, 6 ಲಕ್ಷದ 87 ಸಾವಿರ ಕಾಮೆಂಟ್‌ಗಳು ಬಂದಿವೆ.

Leave a Reply

Your email address will not be published. Required fields are marked *