ಸಿನಿಮಾಗಳನ್ನು ಪ್ರೇಕ್ಷಕರು ಸಾಮಾನ್ಯವಾಗಿ ಮನರಂಜನೆಯ ಮೂಲವಾಗಿ ನೋಡುತ್ತಾರೆ. ಕೆಲವರು ಲವ್‌ ಸ್ಟೋರಿ ಸಿನಿಮಾಗಳನ್ನು ಇನ್ನೂ ಕೆಲವರು, ಹಾರರ್‌ ಅಥವಾ ಥ್ರಿಲ್ಲರ್‌ ಸ್ಟೋರಿ ಉಳ್ಳ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು, ನೈಜ ಘಟನೆಗಳ ಆಧಾರಿತ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. 1988ರಲ್ಲಿ ಮೀರಾ ನಾಯರ್‌ ಅವರ ನಿರ್ದೇಶನದಲ್ಲಿ ನೈಜಾ ಜೀವನಾಧಾರದ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಗಿ ಸಕ್ಸಸ್‌ ಕಾಣಲಿಲ್ಲವಾದರೂ, ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ, ಈತನ ನಟನೆಗೆ ಪ್ರೇಕ್ಷಕರು ದಂಗಾಗಿದ್ದರು. ಇಂದು ನಾವು ಹೇಳಲು ಹೊರಟಿರುವ ಆ ಬಾಲ ಕಲಾವಿದನ ಹೆಸರು ಶಫೀಕ್ ಸೈಯದ್. ತಮ್ಮ 12 ನೇ ವಯಸ್ಸಿನಲ್ಲಿ ಶಫೀಕ್ ಸೈಯದ್ ಅವರು ಬಾಲ ಕಲಾವಿದನಾಗಿ ಶಾರ್ಟ್‌ ಫಿಲಿಂನಲ್ಲಿ ನಟಿಸಿದ್ದರು. ಇವರು ನಟಿಸಿದ ಆ ಸಿನಿಮಾ 1988ರಲ್ಲಿ ರಿಲೀಸ್‌ ಆಗಿತ್ತು. ನಾನಾ ಪಾಟೇಕರ್, ರಘುವೀರ್ ಯಾದವ್, ಇರ್ಫಾನ್ ಖಾನ್ ಮತ್ತು ಅನಿತಾ ಕನ್ವರ್ ಅವರಂತಹ ತಾರಾ ಬಳಗವನ್ನು ಹೊಂದಿದ್ದ ಸಿನಿಮಾದಲ್ಲಿ ಶಫೀಕ್ ಸೈಯದ್ ಅವರಿಗೆ ವಿಶೇಷ ಪಾತ್ರ ಸಿಕ್ಕಿತ್ತು. ಆದರೆ ಈ ಸಿನಿಮಾದ ನಂತರ ಅವರು ಬಣ್ಣದ ಲೋಕದಿಂದ ದಿಢೀರನೆ ನಾಪತ್ತೆಯಾಗಿ ಬಿಟ್ಟಿದ್ದರು.ಶಫೀಕ್ ಸೈಯದ್ ಹುಟ್ಟಿದ್ದು ಬೆಂಗಳೂರಿನ ಒಂದು ಪುಟ್ಟ ಸ್ಲಮ್‌ನಲ್ಲಿ ಮಾಧ್ಯಮ ವರದಿಗಳ ಪ್ರಕಾರ, ಶಫೀಕ್ ಸೈಯದ್ ತನ್ನ ಮನೆಯಿಂದ ತನ್ನ ಸ್ನೇಹಿತರೊಂದಿಗೆ ಮುಂಬೈಗೆ ಓಡಿಹೋಗಿದ್ದ. ತನ್ನ ಆರಂಭಿಕ ವರ್ಷಗಳಲ್ಲಿ, ಶಫೀಕ್ ಚರ್ಚ್‌ಗೇಟ್ ರೈಲ್ವೆ ನಿಲ್ದಾಣದ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದರು. ನಿರ್ದೇಶಕಿ ಮೀರಾ ನಾಯರ್ ಅವರನ್ನು ಸಲಾಂ ಬಾಂಬೆ ಚಿತ್ರ ಮಾಡುವಂತೆ ಆತನ ಬಳಿ ಕೇಳಿಕೊಂಡಿದ್ದರು. ಈ ಸಿನಿಮಾಗಾಗಿ ಆಗಿನ ಕಾಲಕ್ಕೆ ದಿನಕ್ಕೆ 20 ರೂ. ನೀಡುವ ಒಪ್ಪಂದವನ್ನು ಕೂಡ ಮಾಡಲಾಗಿತ್ತು. 

ಸ್ಲಮ್‌ಡಾಗ್‌ ಮಿಲಿನಿಯರ್‌ ಸಿನಿಮಾ ಭಾರತಾದ್ಯಂತ ಜನಪ್ರಿಯವಾದ ನಂತರ ಶಫೀಕ್‌ ಅವರು ತಮ್ಮ ದೈನಂದಿನ ಖರ್ಚುಗಳನ್ನು ಪೂರೈಸಿಕೊಳ್ಳಲು ಬೆಂಗಳೂರಿನಲ್ಲಿ ಬಂದು ಆಟೋ ಓಡಿಸಲು ಶುರು ಮಾಡಿದ್ದರು. ಇವತ್ತಿಗೂ ಕೂಡ ಶಫೀಕ್‌ ಅವರು ತಮ್ಮ ಖರ್ಚುಗಳನ್ನು ನಿಭಾಯಿಸಲು ಆಟೋ ಓಡಿಸುತ್ತಾರೆ. ಸದ್ಯ ಬಾಲನಟನಾಗಿ ಒಂದೆ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿಗೆ ನಾಮ ನಿರ್ದೇಶನ ಪಡೆದಿದ್ದ ಈತ ಇಂದು ವಿವಾಹಿತ, ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಈತ ಇಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *