ಸುಳ್ಯ: ಇಲ್ಲಿನ ನಾವೂರು ನಿವಾಸಿ ಹಾಗೂ ನಗರದ ಹಳೆಯ ತಲೆಮಾರಿನ ಪ್ರಮುಖ ವ್ಯಾಪಾರಿ ಉಗ್ರಣಿ ಅಬ್ದುಲ್ಲ (80 ವರ್ಷ) ಅವರು ನಿಧನರಾಗಿದ್ದಾರೆ.

ಸುಳ್ಯದ ವಾಣಿಜ್ಯ ವಲಯದಲ್ಲಿ ಸುದೀರ್ಘ ಕಾಲದಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ಪ್ರಾಮಾಣಿಕ ವ್ಯಾಪಾರ ಹಾಗೂ ಸ್ನೇಹಪರ ಗುಣದಿಂದ ಸಾರ್ವಜನಿಕರೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು.
🛒 Recommended for You:
ಮೃತರು ಸುಳ್ಯದ ಉದ್ಯಮಿಗಳಾದ ಅಶ್ರಫ್, ಸಿರಾಜುದ್ದೀನ್, ನೌಫಾಲ್ (ಪುತ್ರರು), ಹಾಗೂ ಪುತ್ತೂರಿನ ರಾಯಲ್ ಫರ್ನಿಚರ್ ಮಾಲಕ ರಹೀಮ್ ಸುರಿಬೈಲ್ (ಅಳಿಯ) ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರು ಸ್ಥಳೀಯ ಉದ್ಯಮಿ ಹಸೈನಾರ್ ಹಾಜಿ, ಮರ್ಹೂಮ್ ಮೊಯಿದಿಚ ಹಾಗೂ ಮರ್ಹೂಮ್ ಕಾಂಗ್ರೆಸ್ ಖಾದರ್ ಅವರ ಸಹೋದರರಾಗಿದ್ದಾರೆ.
ಅಂತ್ಯಕ್ರಿಯೆ:
ಮೃತರ ‘ಮಯ್ಯತ್ ನಮಾಝ್’ (ಅಂತ್ಯಕ್ರಿಯೆ ಪ್ರಾರ್ಥನೆ) ಇಂದು ಲುಹ್ರ್ ನಮಾಝ್ ವೇಳೆಗೆ ಸುಳ್ಯದ ಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




