ಮೀಫ್ ಶೈಕ್ಷಣಿಕ ಒಕ್ಕೂಟ ದ ಆಶ್ರಯ ದಲ್ಲಿ ದ. ಕ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉ. ಕನ್ನಡ ಮತ್ತು ಹಾಸನ ಜಿಲ್ಲೆಗಳ ನ್ನೊಳಗೊಂಡ ಸಾಧನೆ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ, ಸಾಧಕ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ಸೀಟ್ ಗಳ ಮಂಜೂರಾತಿ ಆದೇಶ, ಝಕಾತ್ ಫಂಡ್ ಸಹಾಯ ಧನ ವಿತರಣೆ ಮೊದಲಾದ ಕಾರ್ಯಕ್ರಮ ಗಳು ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿತು
2025- 2026 ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಮತ್ತು ಅತ್ಯಧಿಕ ವಿಶಿಷ್ಟ ಶ್ರೇಣಿ, 600 ಕ್ಕೂ ಮಿಕ್ಕಿದ ಅಂಕ ಪಡೆದ ಶಾಲೆಗಳಿಗೆ ವಿಶೇಷ ಪುರಸ್ಕಾರ ನೀಡಲಾಯಿತು
ಸುಳ್ಯ ಗ್ರೀನ್ ವ್ಯೂ ಪ್ರೌಢ ಶಾಲೆಯಲ್ಲಿ ಈ ಬಾರಿ 600 ಕ್ಕೂ ಮಿಕ್ಕಿ ಅಂಕ ಪಡೆದ 3 ವಿದ್ಯಾರ್ಥಿ ಗಳು ಮತ್ತು ಎಲ್ಲಾ ವಿದ್ಯಾರ್ಥಿ ಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಈ ವರೆಗೆ 19 ಬ್ಯಾಚ್ ಗಳಲ್ಲಿ 17 ಬ್ಯಾಚ್ ಗಳು ಶೇಕಡಾ 100 % ಫಲಿ ತಾoಶ ಪಡೆದು ಜಿಲ್ಲೆಯ ಗ್ರಾಮೀಣ ಪ್ರದೇಶ ದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಾಜಿ ಎಂ ಎಲ್ ಸಿ, ಮೈಸೂರು ಫಾರೂಕ್ ಮೆಡಿಕಲ್ ಕಾಲೇಜು ಅಧ್ಯಕ್ಷ ಬಿ. ಎಂ. ಫಾರೂಕ್ ಪ್ರಶಸ್ತಿ ಪ್ರದಾನ ಮಾಡಿದರು
ಮೀಫ್ ಗೌರವಾಧ್ಯಕ್ಷ ಉಮ್ಮರ್ ಟೀಕೇ, ದ. ಕ ಡಿಡಿಪಿಐ ಶಶಿಧರ್ ಉಪಸ್ಥಿತರಿದ್ದರು
ಒಕ್ಕೂಟ ದ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು
ಶಿಕ್ಷಣ ಸಂಸ್ಥೆ ಪರವಾಗಿ ಸಂಚಾಲಕ ಕೆ. ಎಂ. ಮುಸ್ತಫ, ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿ ಪಟ್ಣ ಪ್ರಶಸ್ತಿ ಸ್ವೀಕರಿಸಿದರು

Leave a Reply

Your email address will not be published. Required fields are marked *