ಪ್ರಯಾಣದ ಸಮಯದಲ್ಲಿ ‘ಬಿಸಿ ಚಹಾ’ ಶಬ್ದವನ್ನು ಕೇಳಿದಾಗ ಬಾಯಿಯಲ್ಲಿ ನೀರು ಸುರಿಯುವ ಜನರು, ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಈ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ರೈಲು ಬೋಗಿಯ ಶೌಚಾಲಯದಲ್ಲಿ ಚಹಾ ಪಾತ್ರೆಯನ್ನು ತೊಳೆಯುತ್ತಿರುವುದನ್ನು ಕಾಣಬಹುದಾಗಿದ್ದು, ನೆಟ್ಟಿಗರನ್ನು ಕೆರಳಿಸಿದೆ.
ಹೌದು. ವ್ಯಕ್ತಿಯೊಬ್ಬರು ರೈಲಿನ ಶೌಚಾಲಯದೊಳಗೆ ಜೆಟ್ ಸ್ಪ್ರೇಯಿಂದ ಚಹಾ ಪಾತ್ರೆಯನ್ನು ತೊಳೆಯುತ್ತಿರುವ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಂಟೆಂಟ್ ಕ್ರಿಯೇಟರ್ ಅಯೂಬ್ ಪೋಸ್ಟ್ ಮಾಡಿದ ಈ ವೀಡಿಯೊವನ್ನು 82 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ತುಣುಕಿನಲ್ಲಿ, ವ್ಯಕ್ತಿಯು ಚಹಾ ಪಾತ್ರೆಯನ್ನು ಹಿಡಿದುಕೊಂಡು ಶೌಚಾಲಯದಲ್ಲಿ ನಿಂತು ಅದನ್ನು ಸ್ವಚ್ಛಗೊಳಿಸಲು ಜೆಟ್ ಸ್ಪ್ರೇಯನ್ನು ಬಳಸುತ್ತಾನೆ. “ಟ್ರೈನ್ ಕಿ ಚಾಯ್” (ರೈಲು ಚಹಾ) ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ.ವೀಕ್ಷಕರು ಈ ಕೃತ್ಯದಿಂದ ಅಸಹ್ಯಪಟ್ಟರು., “ಇದು ತಮಾಷೆಯೇ?” ಎಂದು ಒಬ್ಬರು ಕಾಮೆಂಟ್ ಮಾಡಿದರು. ಇತರರು ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.