ಸುಳ್ಯ: ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಹೋಗಿ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಅಡ್ಕಾರ್ ಮಾವಿನಕಟ್ಟೆ ಬಳಿ ನಡೆದಿದೆ.
ಘಟನೆಯ ವಿವರ:
ಅಡ್ಕಾರ್ ಮಾವಿನಕಟ್ಟೆ ಬಳಿ ಕಾರಿಗೆ ನಾಯಿ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಕ ಅದನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಪೆರ್ಲಂಪಾಡಿಯ ತೀರ್ಥ ರಾಜ್ ಅವರ ಎಡದ ಕಾಲು ಮುರಿದು ಕೈಗೆ ಗಾಯವಾಗಿದ್ದು, ಅವರೊಂದಿಗೆ ಪ್ರಯಾಣಿಸುತ್ತಿದ್ದ ಜೂನಿಯರ್ ಕಾಲೇಜು ವಿದ್ಯಾರ್ಥಿಯ ಎಡಕಾಲು ಕ್ರ್ಯಾಕ್ ಆಗಿದ್ದು, ಇಬ್ಬರನ್ನೂ ಶಿವ ಆಂಬುಲೆನ್ಸ್ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಗೆಯೇ ಕೆವಿಜಿ ಆಯುರ್ವೇದಿಕ್ ಸಿಬ್ಬಂದಿಯ ಎರಡು ಕಾಲುಗಳಿಗೆ ಗಾಯಗೊಂಡ ಅವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
