ಅರಂತೋಡು:ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಅರಂತೋಡಿನಲ್ಲಿ ರೋಟರಿ ಕ್ಲಬ್ ಸುಳ್ಯದ ಆಶ್ರಯದಲ್ಲಿ ಇಂಟ್ರಾಕ್ಟ್ ಕ್ಲಬ್ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ ರೋಟೇರಿಯನ್ ಲತಾ ಮಧುಸೂದನ್ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಇಂಟ್ರಾಕ್ಟ್ ಕ್ಲಬ್ನ ನೂತನ ಅಧ್ಯಕ್ಷೆಯಾಗಿ ಹರ್ಷಿತಾ, ಕಾರ್ಯದರ್ಶಿಯಾಗಿ ಪ್ರತೀಕ್ ಪ್ರಸಾದ್ ಹಾಗೂ ಖಜಾಂಚಿಯಾಗಿ ಹನಿ ಅಧಿಕಾರ ಸ್ವೀಕರಿಸಿದರು.
ರೋಟರಿ ಇನ್ಸ್ಟಿಟ್ಯೂಷನ್ಸ್ನ ಕರೆಸ್ಪಾಂಡೆಂಟ್ ರೋಟೇರಿಯನ್ ಪ್ರಭಾಕರನ್ ನಾಯರ್ ಅವರು ರೋಟರಿ ಕ್ಲಬ್ನ ಸೇವಾ ಚಟುವಟಿಕೆಗಳು ಹಾಗೂ ಇಂಟ್ರಾಕ್ಟ್ ಕ್ಲಬ್ನ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂಟ್ರಾಕ್ಟ್ ಕ್ಲಬ್ನ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಪಾಪ್ಯುಲರ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಎಂ. ಅಬ್ದುಲ್ಲ, ಎನ್ಎಂ ಪಿಯು ಕಾಲೇಜಿನ ಕರೆಸ್ಪಾಂಡೆಂಟ್ ರೋಟೇರಿಯನ್ ವಸಂತ ಎ.ಸಿ., ಪ್ರಾಂಶುಪಾಲ ರಮೇಶ್ ಎಸ್., ರೋಟರಿ ಕ್ಲಬ್ ಸುಳ್ಯದ ಪದಾಧಿಕಾರಿಗಳಾದ ರೋ| ಕಸ್ತೂರಿ ಶಂಕರ್,ರೋ|ಹರಿರಾಯ್ ಕಾಮತ್,ರೋ|ನಳಿನಿ ಕಿರ್ಲಾಯ,ರೋ|ಗಣಪತಿ ಭಟ್ , ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಹಾಗೂ ಇಕೋ ಕ್ಲಬ್ ನಿರ್ದೇಶಕಿ ಶಾರಿಖಾ ತಸ್ಲೀಮಾ, ಸೇರಿದಂತೆ ರೋಟರಿ ಕ್ಲಬ್ ಸದಸ್ಯರು, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂಟ್ರಾಕ್ಟ್ ಕ್ಲಬ್ನ ನಿರ್ದೇಶಕಿ ಶ್ರೀಮತಿ ಅಶ್ವಿನಿ ಕೆ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಸುರೇಶ್ ವಾಗ್ಲೆ, ಭಾಗ್ಯಶ್ರೀ,ಮೋಹನ್ ಚಂದ್ರ ಸಹಕರಿಸಿದರು.
