ಪೈಚಾರು ಶಾಂತಿನಗರ ಕ್ರಾಸ್ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಾಯ

News

ಸುಳ್ಯ: ಇಲ್ಲಿನ ಪೈಚಾರು ಸಮೀಪದ ಶಾಂತಿನಗರ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರು ಗಾಯಗೊಂಡ ಘಟನೆ ನಡೆದಿದೆ.

ಸುಳ್ಯದಿಂದ ಪೈಚಾರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಪೈಚಾರು ಕಡೆಯಿಂದ ಸುಳ್ಯ ನಗರದತ್ತ ಹೋಗುತ್ತಿದ್ದ ಇನ್ನೊಂದು ಬೈಕ್ ನಡುವೆ ಶಾಂತಿನಗರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ರಸ್ತೆಗೆ ಉರುಳಿ ಬಿದ್ದಿದ್ದು, ವಾಹನಗಳು ಭಾಗಶಃ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

Leave a Reply

Your email address will not be published. Required fields are marked *