ಸುಳ್ಯ: ಇಲ್ಲಿನ ಕೆ.ವಿ.ಜಿ ಕ್ಯಾಂಪಸ್ ಬಳಿ ಕಾರುಗಳದ್ದೇ ಕಾರುಬಾರಾಗಿದೆ. ಹೌದು ಕೆಳ ದಿನಗಳ ಹಿಂದೆಯಷ್ಟೇ ದುಬೈ ನೊಂದಣಿ ಹೊಂದಿರುವ ಹಲವು ಸೂಪರ್ ಕಾರುಗಳು ಬೆಂಗಳೂರಿನ ಸ್ಟ್ರೀಟ್ ಗಳಲ್ಲಿ ಸಖತ್ ಸದ್ದು ಮಾಡಿತ್ತು, ನಿನ್ನೆ ಅಸರಲ್ಲಿದ್ದ ಕೆಲವು ಕಾರುಗಳು ಸುಳ್ಯದ ಸ್ಟ್ರೀಟ್ ನಲ್ಲೂ ಸದ್ದು ಮಾಡಿದೆ. ಡೋಡ್ಜ್ ಚಾಲೆಂಜರ್ ಸೇರಿದಂತೆ ಹಲವು ಕಾರುಗಳು ಸುಳ್ಯದಲ್ಲಿ ಸದ್ದು ಮಾಡಿವೆ. ಕೆವಿಜಿ ಕ್ಯಾಂಪಸ್ ಬಳಿ ಕಾರು ಬರುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಈ ಸಮಯ ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು.