Nammasullia: ಇಂಗ್ಲೆಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ (Harry Kane) 2026ನೇ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ (Ballon d’Or) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯದಾಗಿ 2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿ ಪಡೆದಿದ್ದರು. ಈಗ ಬರೋಬ್ಬರಿ 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಮೊದಲ ಇಂಗ್ಲಿಷ್ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಹ್ಯಾರಿ ಕೇನ್ ಬರೆದಿದ್ದಾರೆ.
ರಿಯಲ್ ಮ್ಯಾಡ್ರಿಡ್ ತಂಡದ ಕಿಲಿಯನ್ ಎನ್‌ಬಾಪ್ಪೆ ಎರಡನೇ ಸ್ಥಾನ ಹಾಗೂ ಬಾರ್ಸಿಲೋನಾದ ಯುವ ಪ್ರತಿಭೆ ಲಮಿನ್ ಯಮಾಲ್ ಮೂರನೇ ಸ್ಥಾನ ಪಡೆದಿದ್ದು, ಇವರನ್ನು ಹಿಮ್ಮೆಟ್ಟಿ ಕೇನ್ ಈ ಪ್ರಶಸ್ತಿ ಪಡೆದಿದ್ದಾರೆ. ಬೇಯರ್ನ್ ಮ್ಯೂನಿಚ್ ಕ್ಲಬ್ ಮತ್ತು ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರವಾಗಿ ಅತ್ಯುತ್ತಮ ಆಟವಾಡಿರುವ ಕೇನ್, ಒಟ್ಟು 65 ಪಂದ್ಯಗಳಿಂದ 73 ಗೋಲುಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದು, ಇದೇ ವೇದಿಕೆಯಲ್ಲಿ ಗರ್ಡ್ ಮುಲ್ಲರ್ ಟ್ರೋಫಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಸ್ಪೇನ್ ಹಾಗೂ ಬಾರ್ಸಿಲೋನಾದ ಸ್ಟಾರ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಮೂರನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
