ಕರ್ನಾಟಕದಲ್ಲಿ ಅತಿಹೆಚ್ಚು ಆದಾಯ ಗಳಿಸುವ ನಂ.1 ಪ್ರಾದೇಶಿಕ ಸಾರಿಗೆ ಕಚೇರಿಗಳು (Regional Transport Office-RTO) ಬೆಂಗಳೂರಿನಲ್ಲಿವೆ. ಇಲ್ಲಿ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಕೋಟ್ಯಂತರ ಆದಾಯ ಬರುತ್ತದೆ. ಇಂದು ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಒಂದು ನಂಬರ್ ಪ್ಲೇಟ್ ಅನ್ನು ಬರೋಬ್ಬರಿ 28.60 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.
ಇನ್ನು ಒಂದೇ ದಿನದಲ್ಲಿ ಆರ್‌ಟಿಒ ಇಲಾಖೆ ಫ್ಯಾನ್ಸಿ ನಂಬರ್ ಹರಾಜಿನಲ್ಲಿ 1.11 ಕೋಟಿ ರೂ. ಆದಾಯವನ್ನು ಗಳಿಸಿದೆ.
ಹೌದು, ಬೆಂಗಳೂರು ಸೆಂಟ್ರಲ್ ಪ್ರಾದೇಶಿಕ ಸಾರಿಗೆ ಕಚೇರಿಗಳು ರಾಜ್ಯದಲ್ಲಿ ಅತಿಹೆಚ್ಚು ಆದಾಯ ಗಳಿಸುವ ಆರ್‌ಟಿಒ ಕಚೇರಿಗಳಾಗಿವೆ. ಇಲ್ಲಿ ಹರಾಜು ಮಾಡಲಾಗುವ ವಾಹನಗಳ ಫ್ಯಾನ್ಸಿ ನಂಬರ್‌ಗಳಿಗೆ ಭಾರೀ ಬೇಡಿಕೆ ಇರುತ್ತದೆ. ಇಲ್ಲಿ ನಡೆದ ಪ್ಯಾನ್ಸಿ ನಂಬರ್ ಪ್ಲೇಟ್‌ನ ಹರಾಜು ಪ್ರಕ್ರಿಯೆಯಲ್ಲಿ ಕೋರಮಂಗಲ ಫ್ಯಾನ್ಸಿ ನಂಬರ್ ದಾಖಲೆಯನ್ನು ಬರೆದಿದೆ. ಕೋರಮಂಗಲದ 0001 ಎಂಬ ಫ್ಯಾನ್ಸಿ ನಂಬರ್ ಬರೋಬ್ಬರಿ 28 ಲಕ್ಷ ರೂಪಾಯಿಗೆ ಹರಾಜಾಗಿದೆ. ಈವರೆಗೆ ಯಾವುದೇ ಫ್ಯಾನ್ಸಿ ನಂಬರ್ ಬರೆಯದ ದಾಖಲೆಯನ್ನು ಇದೀಗ ನಿರ್ಮಿಸಿದೆ. ಒಟ್ಟಾರೆಯಾಗಿ ಆರ್‌ಟಿಒ ಕಚೇರಿಯು ಒಂದು ದಿನದಲ್ಲಿ ಫ್ಯಾನ್ಸಿ ನಂಬರ್ ಹರಾಜಿನಿಂದ 1.13 ಕೋಟಿ ರೂಪಾಯಿ ಆದಾಯ ಗಳಿಸಿದೆ.ಈ ಹಿಂದೆ KA01-NE-0001 ಫ್ಯಾನ್ಸಿ ನಂಬರ್ 21.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಈವರೆಗೆ ಇದೇ ನಂಬರ್ ಪ್ಲೇಟ್ ಅತಿಹೆಚ್ಚು ಬೆಲೆಗೆ ಮಾರಾಟವಾದ ಫ್ಯಾನ್ಸಿ ನಂಬರ್ ಎಂಬ ಖ್ಯಾತಿಯಲ್ಲಿತ್ತು. ಆದರೆ, ಇಂದು ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ KA01-NF-0001 ನಂಬರ್ 28.60 ಲಕ್ಷ ರೂ.ಗೆ ಮಾರಾಟವಾಗಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಶಾಂತಿನಗರದ ಆರ್‌ಟಿಒ ಮುಖ್ಯ ಕಚೇರಿಯಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ. ಇಂದಿನ ಹರಾಜಿನಲ್ಲಿ ಸರ್ಕಾರಕ್ಕೆ 1,11,30,000 ರೂ. ಆದಾಯವನ್ನು ಪಡೆದಿದೆ. ಇಂದು ಹರಾಜಿಗಿಟ್ಟಿದ್ದ 65 ನಂಬರ್‌ಗಳ ಪೈಕಿ 14 ಫ್ಯಾನ್ಸಿ ನಂಬರ್ ಗಳು ಹರಾಜಾಗಿವೆ. ಉಳಿದಂತೆ ಇತರೆ ನಂಬರ್‌ಗಳು ಕೂಡ ಮಾರಾಟವಾಗಿವೆ.
ಇಂದು ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಫ್ಯಾನ್ಸಿ ನಂಬರ್ ಗಳು.
1-KA01-NF-0001- 28.60 ಲಕ್ಷ ರೂಪಾಯಿ.
2-KA-01-NF-9999 4.80 ಲಕ್ಷ ರೂಪಾಯಿ.
3-KA-01-NF-0333 – 2.80 ಲಕ್ಷ ರೂಪಾಯಿ.
4-KA01-NF-7777 -2.50 ಲಕ್ಷ ರೂಪಾಯಿ.
5-KA01-NF-0009 -2 ಲಕ್ಷ ರೂಪಾಯಿ.