Nammasullia: ಇಂದು ರಾತ್ರಿ ಬೀಸಿದ ಭಾರಿ ಗಾಳಿಗೆ ಅರಂತೋಡಿನ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದೆ. ಕೆಲಕಾಲ ರಸ್ತೆ ತಡೆ ಉಂಟಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ. ಶಾದಿ ಮಹಲ್ ಪಕ್ಕದ ನಿವಾಸಿಗಳಾದ ಮಜೀದ್ ಸಿಟಿ ಮೆಡಿಕಲ್ಸ್ ರವರಿಗೆ ತಿಳಿಸಿದರು. ತದನಂತರ ಖಾದರ್ ಮೊಟ್ಟಂಗಾರ್, ನವಾಝ್, ಖಾದರ್, ಯು. ಎಸ್ ಜಿ ಶಾಮಿಯಾನ ಮನೀಶ್ ಉಳುವಾರು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್, ಸುಕುಮಾರ ಉಳುವಾರು, ಮುಜಾಮ್ಮಿಲ್, ಆರಿಫ್ ದರ್ಖಾಸ್, ಮಿಸ್ಬಾ, ಬಾತಿಷ, ತಾಜುದ್ದೀನ್ ಅರಂತೋಡು ಇವರ ಸಹಾಯದಿಂದ ಮರವನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

