ಆಸ್ಪತ್ರೆಗಳು ಬಡವರ ಪಾಲಿನ ಆಶಾಕಿರಣ ವಾಗಲಿ ಜನಪ್ರಿಯ ಆಸ್ಪತ್ರೆಯ ವಿವಿಧ ಘಟಕ ಉದ್ಘಾಟಿಸಿ ಮಾತನಾಡಿದ ಸಯ್ಯಿದುಲ್ ಉಲಮ ಜಿಫ್ರಿ ಮುತ್ತುಕೊಯ ತಂಙಳ್
ಮಂಗಳೂರು ಜನಪ್ರಿಯ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಘಟಕದ ಮತ್ತು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಡಾಕ್ಟರ್ ಅಬ್ದುಲ್ ಬಶೀರ್ ಅವರ ಮಾಲಕತ್ವದ ಜನಪ್ರಿಯ ಆಸ್ಪತ್ರೆಯಲ್ಲಿ ವಿವಿಧ ಘಟಕಗಳ ಉದ್ಘಾಟನೆ ಮತ್ತು ದುವಾವನ್ನು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷರಾದ ಸಯ್ಯಿದುಲ್ ಉಲಮ ಜಿಫ್ರಿ ಮುತ್ತುಕೋಯ ತಂಘಲ್ ನೆರೆವೇರಿಸಿ ಮಾತನಾಡಿ ವೈದ್ಯರ ಮತ್ತು ದಾನಿಗಳ ಸಹಕಾರದಿಂದ ಡಯಾಲಿಸಿಸ್ ಯಂತ್ರ, ಭೌತ ಚಿಕಿತ್ಸೆ( Physiotheraphy), ದಂತ ಚಿಕಿತ್ಸೆ, ಸ್ವಲೀನತೆ (Autism) ಜಠರ, ಕರುಳು, ಯಾಕೃತ ಮುಂತಾದ ಚಿಕಿತ್ಸೆ ದೊರೆಯುತ್ತಿದ್ದು ಬಡವರಿಗೆ ಸಹಾಯ ಆಗುತ್ತದೆ ಇದು ಕೂಡು ಒಂದು ಸೇವೆ ಎಂದು ಅಭಿನಂದಿಸಿ ಬಡವರಿಗೆ ಸಹಾಯ ಹಸ್ತ ಚಾಚಿದವರಿಗೆ, ಡಾಕ್ಟರ್ ಬಶೀರ್ ಮತ್ತು ಕುಟುಂಬಸ್ಥರು ಅಲ್ಲದೆ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿ ಬರುವ ರೋಗಿಗಳಿಗೆ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು, ಆಸ್ಪತ್ರೆಗೆ ಬರುವ ಬಡರೋಗಿಗಳ ಪಾಲಿಗೆ ಆಶಾಕಿರಣ ವಾಗಲಿ ಎಂದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾದ್ಯಕ್ಷ ರಾದ ಟಿ.ಎಂ ಶಾಹಿದ್ ತೆಕ್ಕಿಲ್ ಗ್ರಾಮೀಣ ಪ್ರದೇಶದ ಜನರಿಗೆ ಜನಪ್ರಿಯ ಆಸ್ಪತ್ರೆ ಮುಖಾಂತರ ಹಾಸನದಲ್ಲಿ ಕಳೆದ 11 ವರ್ಷದಿಂದ ಆರೋಗ್ಯ ಮತ್ತು ಸಾಮಾಜಿಕ ಸೇವೆ ನೀಡಿ ಯಶಸ್ವಿಯಾಗಿ ಇದೀಗ ಮಂಗಳೂರು ಭಾಗದ ಗ್ರಾಮೀಣ ಜನರಿಗೆ ಆರೋಗ್ಯ ಭಾಗ್ಯ ನೀಡುವ ಯೋಜನೆಯೊಂದಿಗೆ ಎಲ್ಲಾ ರಾಜಕೀಯ ಪಕ್ಷದ ಸರ್ವ ಧರ್ಮ ಮತ್ತು ಸಮಾಜದ ಪ್ರೀತಿಗೆ ಪಾತ್ರರಾಗಿ ಕಳೆದ ಮೂವತ್ತು ವರ್ಷ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕುಟುಂಬಸ್ಥರಾದ ಜನಪ್ರಿಯ ಡಾಕ್ಟರ್ ಬಶೀರ್ ಹಾಗು ಅವರ ಪತ್ನಿ ತೆಕ್ಕಿಲ್ ನಸ್ರಿನ ಪಾದೂರ್ ಮತ್ತು ಮಕ್ಕಳನ್ನು ಅಭಿನಂದಿಸಿದರು. ಮುಂದಿನ ದಿನದಲ್ಲಿ ಪುತ್ತೂರು ಉಪ ವಿಭಾಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕರೆ ನೀಡಿದರು, ಈ ಸಂದರ್ಭದಲ್ಲಿ ಡಾಕ್ಟರ್ ಬಶೀರ್ ಪತ್ನಿ ತೆಕ್ಕಿಲ್ ನಸ್ರಿನ ಪಾದೂರ್ ಪುತ್ರ ಡಾಕ್ಟರ್ ಶಾರುಖ್ ಮತ್ತು ಕುಟುಂಬಸ್ಥರು ಶಾಹಿದ್ ತೆಕ್ಕಿಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂಧರ್ಭದಲ್ಲಿ ಇರ್ಷಾದ್ ದಾರಿಮಿ ಮಿತ್ತಬೈಲು, ಅಬ್ಬಾಸ್ ಫೈಝಿ ಪುತ್ತಿಗೆ, ಯು ಟಿ ಇಫ್ತಿಕಾರ್, ರಿಯಾಸ್ ಬಾವ, ಎಸ್ ಎಂ ಮುಸ್ತಫ, ಡಾಕ್ಟರ್ ಸಚ್ಚಿದಾನಂದ ರೈ, ಹಸನಬ್ಬ ಚಾರ್ಮಾಡಿ, ಎನ್ ಎಸ್ ಕರೀಂ,ಇಸ್ಮಾಯಿಲ್ ನವಾಜ್,ಅಶ್ರಫ್ ಕಲ್ಲೇಗ,ಜಬ್ಬಾರ್ ಮಾರಿಪ್ಪಳ್ಳ,ಸಿರಾಜ್ ಮಾನಿಲ ಮೊದಲಾದವರು ಭಾಗವಹಿಸಿದರು. ಡಾಕ್ಟರ್ ಅಬ್ದುಲ್ ಬಶೀರ್ ಸ್ವಾಗತಿಸಿ ಡಾಕ್ಟರ್ ಕಿರಾಶ್ ಪರ್ತಿಪ್ಪಾಡಿ ವಂದಿಸಿದರು.