ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಜನವರಿ 26 ರಂದು ಹಿರಿಯ ವಿದ್ಯಾರ್ಥಿ ಗಳ ಸಮಾವೇಶ ಸ್ನೇಹ ಸಮ್ಮಿಲನ ಆಯೋಜಿಸಲಾಗಿದ್ದು ಸದ್ರಿ ಕಾರ್ಯಕ್ರಮದ ಬಿತ್ತಿ ಪತ್ರವನ್ನು ಸಂಚಾಲಕ ಕೆ. ಎಂ. ಮುಸ್ತಫ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ. ಎಂ. ಮುಸ್ತಫ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಿಂದ ಈ ವರೆಗೆ 17 ಬ್ಯಾಚ್ ಗಳು ಹೊರ ಹೋಗಿದ್ದು ದೇಶ, ವಿದೇಶ ಗಳಲ್ಲಿ ಉದ್ಯೋಗ, ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಾರೆ, ಇವರೆಲ್ಲರನ್ನು ಒಟ್ಟುಗೂಡಿಸಿ ಹಳೆಯ ನೆನಪುಗಳ ಮೆಲುಕು, ಅಭಿವೃದ್ಧಿ ಯ ಚಿಂತನೆ, ಆಟ, ಅಧ್ಯಾ ಪಕರೊಂದಿಗೆ ಸಂವಾದ, ಸಹ ಭೋಜನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು. ಅಲ್ಲದೇ ಪ್ರತಿಭಾನ್ವಿತರನ್ನು ಸನ್ಮಾನಿಸಲಾಗುವುದು ಎಂದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸಂಯೋಜಕ ಕೆ. ಎಸ್. ಉಮ್ಮರ್, ಮುಖ್ಯ ಶಿಕ್ಷಕ ಇಲ್ಯಾಸ್. ಕೆ. ಕಾಶಿಪಟ್ಟಣ, ಹಿರಿಯ ಶಿಕ್ಷಕ ರುಗಳಾದ ಜಯಂತಿ, ದೇವಕಿ, ರಂಜಿತ್ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *