ಅರಂತೋಡು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಮುಡಿಪು ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

​ಆಯ್ಕೆಯಾಗಿರುವ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ:

  • ಶಾನ್ವಿ ಎಂ. ಸಿ. (ಮಾವಜಿ ಚಂದ್ರಶೇಖರ ಹಾಗೂ ಉಷಾ ದಂಪತಿಯ ಪುತ್ರಿ)
  • ದಿಶಾನ್ ಎನ್. ಪಿ. (ನೀರಬಿದಿರೆ ಪ್ರಶಾಂತ್ ಹಾಗೂ ಸುಮಲತಾ ದಂಪತಿಯ ಪುತ್ರ)
  • ವೈಭವ್ ಕೆ. ಎಸ್. (ಕೊಳಂಗಾಯ ಅಜ್ಜನಗದ್ದೆ ಸದಾನಂದ ಹಾಗೂ ಯಶಸ್ವಿನಿ ದಂಪತಿಯ ಪುತ್ರ)

​ಗ್ರಾಮೀಣ ಭಾಗದ ಶಾಲೆಯಿಂದ ಒಮ್ಮೆಲೇ ಮೂವರು ವಿದ್ಯಾರ್ಥಿಗಳು ಪ್ರತಿಷ್ಠಿತ ನವೋದಯ ಶಾಲೆಗೆ ಆಯ್ಕೆಯಾಗಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಸಾಧನೆಗೈದ ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ಊರಿನವರು ಅಭಿನಂದನೆ ಹಾಗೂ ಶುಭಾಶಯಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *