
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 217 ಬೂತ್ ನಲ್ಲಿ 8 ಬೂತ್ ಸಂಪೂರ್ಣ ಉಸ್ತುವಾರಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇಮಕ ಮಾಡಿದ್ದಾರೆ. ಸಚಿವರು ನಿಗಮ ಮಂಡಳಿ ಅಧ್ಯಕ್ಷರು ಹಾಗು ಶಾಸಕರನ್ನು ಉಸ್ತುವಾರಿಯಾಗಿ ವಿವಿಧ ಬೂತ್ ಗಳಲ್ಲಿ ನೇಮಕಗೊಳಿಸಿದ್ದು ಉಸ್ತುವಾರಿಗಳ ಅಡಿಯಲ್ಲಿ ಎಂಟು ಮಂದಿ ಕೆಪಿಸಿಸಿ ಪದಾಧಿಕಾರಿ ,ಕೋಆರ್ಡಿನೇಟರ್ ಪದಾಧಿಕಾರಿಗಳು ಮತ್ತು ಎಂಟು ಮಂದಿ ಸ್ಥಳೀಯ ನಾಯಕರು ಸಹಕರಿಸಲಿದ್ದಾರೆ.ಮುಂದಿನ ಚುನಾವಣೆ ವರೆಗೆ ಬೂತ್ ಇರುವ ಸ್ಥಳದಲ್ಲಿ ಮಾತ್ರ ಕೆಲಸ ಮಾಡಲು ಎಐಸಿಸಿ ಹಾಗು ಕೆಪಿಸಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.





