ಸುಳ್ಯ: ನಗರದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನವಾಝ್ ಬೆಳ್ಳಾರೆಯವರ ಮಾಲೀಕತ್ವದ ನೂತನ ‘ಓನಿಕ್ಸ್ ಡ್ರೈ ಫ್ರೂಟ್ಸ್ & ನಟ್ಸ್’ ಶೋರೂಮ್ ಇಂದು ಉದ್ಘಾಟನೆಗೊಂಡಿತು.

​ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ. ಎಂ. ಶಾಹಿದ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಶುಭಕೋರಿದರು.

​ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಹೇಮಂತ್ ಕಾಮತ್, ಯುವ ಉದ್ಯಮಿ ರಂಜಿತ್ ಕುರುಂಜಿಭಾಗ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ಹಾಗೂ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಭಾಗವಹಿಸಿದ್ದರು.

​ಹಾಗೆಯೇ, ನಗರ ಪಂಚಾಯತ್‌ನ ನಿಕಟಪೂರ್ವ ಸದಸ್ಯರುಗಳಾದ ಉಮ್ಮರ್ ಕೆ. ಎಸ್ ಮತ್ತು ಸಿದ್ದೀಕ್ ಕೊಕ್ಕೊ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಜನತಾ ಗ್ರೂಪ್ಸ್‌ನ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು. ಇವರೊಂದಿಗೆ ಅನಿವಾಸಿ ಉದ್ಯಮಿಗಳಾದ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ಅಬ್ದುಲ್ ರೆಹಮಾನ್ ಎಸ್. ಎಂ., ಮಹಮೂದ್ ಬೆಳ್ಳಾರೆ ಹಾಗೂ ಶುಕೂರ್ ಹಾಜಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗ್ರಾಹಕರಿಗೆ ವಿಶೇಷ ರಿಯಾಯಿತಿ:

ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದ್ದು, ಎಲ್ಲಾ ರೀತಿಯ ಡ್ರೈ ಫ್ರೂಟ್ಸ್‌ಗಳನ್ನು ಒಳಗೊಂಡ ‘ಕಾಂಬೊ ಪ್ಲಾನ್’ ಅತ್ಯಂತ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಮಳಿಗೆಯ ಮಾಲೀಕರಾದ ನವಾಜ್ ಬೆಳ್ಳಾರೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *