ಸುಳ್ಯ: ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.) ಜಟ್ಟಿಪಳ್ಳ, ಸುಳ್ಯ ಇದರ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಸಂಘಟನೆಯ ಗೌರವ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಅಧ್ಯಕ್ಷರಾದ ರಝಾಕ್ ಕೊಡಿಯಾಲಬೈಲು ಅವರ ನಿವಾಸದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
2026-27ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
- ಗೌರವ ಅಧ್ಯಕ್ಷರು: ರಶೀದ್ ಜಟ್ಟಿಪಳ್ಳ
- ಅಧ್ಯಕ್ಷರು: ರಝಾಕ್ ಕೆ.ಎಂ
- ಉಪಾಧ್ಯಕ್ಷರು: ಸಿಯಾಬ್ ಸಿ.ಎ
- ನಿಕಟಪೂರ್ವ ಅಧ್ಯಕ್ಷರು: ಸಿಯಾಬ್ ಷಾ
- ಪ್ರಧಾನ ಕಾರ್ಯದರ್ಶಿ: ಮೊಯಿದೀನ್
- ಜೊತೆ ಕಾರ್ಯದರ್ಶಿಗಳು: ಸಿಯಾಬುದ್ದೀನ್ ಜೆ.ಎಂ ಹಾಗೂ ಬದ್ರುದ್ದೀನ್
- ಕೋಶಾಧಿಕಾರಿ: ಸಿದ್ದೀಕ್ ಸಿ.ಎ
- ಸಂಘಟನಾ ಕಾರ್ಯದರ್ಶಿಗಳು: ರಹೀಮ್ ಹಾಗೂ ನಾಸಿರ್ ಸಿ.ಎ
- ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಉಸ್ತುವಾರಿ: ನಿಝಾರ್ ಜಟ್ಟಿಪಳ್ಳ ಮತ್ತು ಖಾದರ್ ಜಟ್ಟಿಪಳ್ಳ
- ನಿರ್ದೇಶಕರು: ಇಮ್ರಾನ್ ಅಮೈ






