ಕಲ್ಲುಗುಂಡಿ: ಇಲ್ಲಿನ ಮುಹೀಯದ್ದೀನ್ ಜುಮ್ಮಾ ಮಸೀದಿ ಅಧೀನದ ಪ್ರಮುಖ ಸಂಸ್ಥೆಯಾದ ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಇದರ 2026-27ನೇ ಸಾಲಿನ ನೂತನ ಸಮಿತಿ ರಚನಾ ಸಭೆಯು ಮೇ 5 ರಂದು ಯಶಸ್ವಿಯಾಗಿ ನಡೆಯಿತು.

ಸಭೆಯ ಆರಂಭದಲ್ಲಿ ಖತೀಬ್ ನಾಸಿರ್ ದಾರಿಮಿ ಉಸ್ತಾದ್ ಅವರು ದುಆ ನೆರವೇರಿಸಿದರು. ಎ.ಕೆ. ಇಬ್ರಾಹಿಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ರಝಕ್ ಸೂಪರ್ ಮಂಡಿಸಿದರು.
ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
2026-27ನೇ ಸಾಲಿನ ನೂತನ ಸಮಿತಿ ಪಟ್ಟಿ:
- ಅಧ್ಯಕ್ಷರು: ಇಬ್ರಾಹಿಂ ಎ.ಕೆ.
- ಉಪಾಧ್ಯಕ್ಷರು: ಜಲೀಲ್ ಭಾರತ್
- ಪ್ರಧಾನ ಕಾರ್ಯದರ್ಶಿ: ರಜಾಕ್ ಸೂಪರ್
- ಕಾರ್ಯದರ್ಶಿ: ಫಾರೂಕ್ ಕಾನಕ್ಕೋಡ್
- ಜತೆ ಕಾರ್ಯದರ್ಶಿ: ರುಶೈದ್ ಕೆ.ಎಂ.
- ಕೋಶಾಧಿಕಾರಿ: ಆಶಿಕ್ ಕೆ.ಎಚ್.
ಕಾರ್ಯಕಾರಿ ಸಮಿತಿ ಸದಸ್ಯರು:
ಲತೀಫ್ ಗುಲ್ಮಕಜೆ, ಮುನೀರ್ ಕೆ.ಎಂ., ಅಲಿ ಕೆ.ಇ., ಶಂಶೀದಲಿ ಎಚ್.ಎ., ಅರ್ಷಾಬ್ ಕೆ.ಎ., ನಿಜಾಮ್ ಎಸ್.ಎ., ಹಸೈನ್ ಸಿ.ಎ., ಹಾಗೂ ಮಿರ್ಷಾದ್ ನೆಲ್ಲಿಕುಮೇರಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ






