ಸುಳ್ಯ: ಇಂದು ಮೇ 13. ಕ್ಯಾಲೆಂಡರ್ ಪ್ರಕಾರ ಇದು ಕೇವಲ ಒಂದು ದಿನಾಂಕವಾಗಿರಬಹುದು. ಆದರೆ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಮಾತ್ರ ಇಂದು ‘ರೋಮ್ಯಾಂಟಿಕ್’ ದಿನವೋ ಅಥವಾ ತಮಾಷೆಯ ದಿನವೋ ಎಂಬಂತೆ ಭರ್ಜರಿ ಟ್ರೆಂಡ್ ಸೃಷ್ಟಿಯಾಗಿದೆ.

ಏನಿದು ಮೇ 13ರ ಲಾಜಿಕ್?
ಹಿಂದಿ ಭಾಷೆಯಲ್ಲಿ ಅಂಕಿಗಳನ್ನು ಎಣಿಸುವಾಗ 11ಕ್ಕೆ ‘ಗ್ಯಾರಾ’, 12ಕ್ಕೆ ‘ಬಾರಾ’ ಎಂದು ಕರೆದರೆ, 13ಕ್ಕೆ ‘ತೇರಾ’ (Tera) ಎನ್ನಲಾಗುತ್ತದೆ. ಈ ಲೆಕ್ಕಾಚಾರವನ್ನೇ ಬಳಸಿಕೊಂಡಿರುವ ನೆಟ್ಟಿಗರು, ಇಂದಿನ ಇಂಗ್ಲಿಷ್ ತಿಂಗಳು ‘May’ ಜೊತೆಗೆ ಹಿಂದಿಯ ’13’ (ತೇರಾ) ಅನ್ನು ಸೇರಿಸಿ ‘ಮೈ ತೇರಾ’ (Main Tera) ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ಹಿಂದಿಯಲ್ಲಿ “ಮೈ ತೇರಾ” ಎಂದರೆ “ನಾನು ನಿನ್ನವನು” ಎಂಬ ಅರ್ಥ ಬರುವುದರಿಂದ, ಪ್ರೇಮಿಗಳು ಹಾಗೂ ಮೀಮ್ಸ್ ತಯಾರಕರು ಇದನ್ನು ಸಖತ್ ಆಗಿ ಬಳಸಿಕೊಳ್ಳುತ್ತಿದ್ದಾರೆ.
ಅರಿಜಿತ್ ಸಿಂಗ್ ಹಾಡಿನ ಮೋಡಿ:
ಬಾಲಿವುಡ್ ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಾಡಿರುವ ‘ಕಳಂಕ್’ ಚಿತ್ರದ ಪ್ರಸಿದ್ಧ ಹಾಡು “ಮೈ ತೇರಾ… ಮೈ ತೇರಾ…” ಎನ್ನುವ ಸಾಲುಗಳನ್ನು ಇಂದಿನ ದಿನಾಂಕಕ್ಕೆ ಅನ್ವಯಿಸಿ ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ವಾಟ್ಸಾಪ್ ಸ್ಟೇಟಸ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸಿಂಗಲ್ಸ್ ಮತ್ತು ಟ್ರೋಲರ್ಸ್ ಫುಲ್ ಬ್ಯುಸಿ!
ಈ ದಿನಾಂಕವನ್ನು ಬಳಸಿಕೊಂಡು ತಮ್ಮ ಭಾವನೆಗಳನ್ನು ಟ್ರೋಲರ್ಗಳು “ಇಂದು ಇಡೀ ದಿನ ಈ ಹಾಡಿನದ್ದೇ ಕಾಟ” ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭಾಷೆ ಮತ್ತು ಅಂಕಿಗಳ ಈ ಒಂದು ತಮಾಷೆಯ ಮಿಶ್ರಣ ಇಂದು ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.






