ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿರುವ, ಉತ್ತರ ಪ್ರದೇಶ ಕೇಡರ್‌ನ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ಪಶ್ಚಿಮ ಬಂಗಾಳಕ್ಕೆ ಐದು ವರ್ಷಗಳ ಕಾಲ ನಿಯೋಜನೆ (Deputation) ಮಾಡಿದೆ.

​ತಮ್ಮ ಕಟ್ಟುನಿಟ್ಟಾದ ಪೊಲೀಸ್ ಕಾರ್ಯಶೈಲಿ ಹಾಗೂ ಅಪರಾಧ ಜಾಲಗಳ ವಿರುದ್ಧದ ಕಠಿಣ ಕಾರ್ಯಾಚರಣೆಗಳಿಂದಾಗಿ ‘ಯುಪಿಯ ಸಿಂಗಂ’ ಎಂದೇ ಕರೆಯಲ್ಪಡುವ ಅಜಯ್ ಪಾಲ್ ಶರ್ಮಾ, ಪ್ರಸ್ತುತ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ (ACP) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗವು ಇವರನ್ನು ಸೂಕ್ಷ್ಮ ಪ್ರದೇಶವಾದ ದಕ್ಷಿಣ 24 ಪರಗಣ ಜಿಲ್ಲೆಗೆ ವೀಕ್ಷಕರನ್ನಾಗಿ ನೇಮಿಸಿತ್ತು. ಇದೀಗ ಗೃಹ ಸಚಿವಾಲಯವು ಅವರನ್ನು 5 ವರ್ಷಗಳ ಸುದೀರ್ಘ ಅವಧಿಗೆ ಬಂಗಾಳಕ್ಕೆ ನಿಯೋಜಿಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮತ್ತು ಆಡಳಿತ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *