Author: namma sullia

SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ವತಿಯಿಂದ 4 ಯೂನಿಟ್ ಬ್ಲಡ್ ದಾನ

ಸುಳ್ಯ: ದಿನಾಂಕ 03.07.2024 ರಂದು ಒಂದೇ ದಿನದಲ್ಲಿ ಸುಳ್ಯ ಕೆವಿಜಿ ಹಾಗೂ ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ಮುಖಾಂತರ 4 ಯೂನಿಟ್ ಬ್ಲಡ್ ಡೊನೇಟ್ ಮಾಡಲಾಯಿತು.

ಫೋನ್ ಮೂಲಕ ಬೋಚೆಗೆ ಧನ್ಯವಾದ ತಿಳಿಸಿದ ರಹೀಮ್

ತಿರುವನಂತಪುರ : ರಿಯಾದ್ ಕ್ರಿಮಿನಲ್ ನ್ಯಾಯಾಲಯದ ಮರಣದಂಡನೆಯನ್ನು ರದ್ದುಗೊಳಿಸಿದ ಆದೇಶದ ನಂತರ ಅಬ್ದುಲ್ ರಹೀಮ್ ಬಾಬಿ ಚೆಮ್ಮನ್ನೂರ್ ಅವರಿಗೆ ದೂರವಾಣಿ ಮೂಲಕ ಧನ್ಯವಾದ ತಿಳಿಸಿದ್ದಾರೆ. ತಾವು ಮಾಡಿದ ಸಹಾಯವನ್ನು ಯಾವತ್ತು ಮರೆಯುವುದಿಲ್ಲ ಎಂದು ಹೇಳಿದರು. ಖುದ್ದು ಭೇಟಿಯಾಗಿ ಬಾಬಿ ಚೆಮ್ಮನ್ನೂರ್ ಹಾಗೂ…

ಪೆನ್ನು ಚುಚ್ಚಿ ನಾಲ್ಕು ವರ್ಷದ ಮಗು ಸಾವು.!

ಪೆನ್ನು ಚುಚ್ಚಿದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂನಲ್ಲಿ ಈ ಘೋರ ದುರಂತವೊಂದು ನಡೆದಿದೆ. ರಿಯಾನ್ಸಿಕಾ ಮೃತ ಬಾಲಕಿ. ಬೆಡ್ ಮೇಲೆ ಆಟವಾಡುತ್ತಿದ್ದಾಗ ಕೆಳಗೆ ಬಿದ್ದ ರಯಾನ್ಶಿಕಾ ಪೆನ್ನು ಕಿವಿಯ ಮೇಲ್ಭಾಗಕ್ಕೆ ನುಗ್ಗಿತ್ತು. ಇದರಿಂದ ತೀವ್ರ…

NEET ಪರೀಕ್ಷೆ ನಂಬಿಕೆ ಕಳೆದುಕೊಂಡಿವೆ ಇಂತಹ ಪರೀಕ್ಷೆಗಳನ್ನು ರದ್ದುಗೊಳಿಸಿ- ಖ್ಯಾತ ನಟ ವಿಜಯ್

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕರೂ ಆದ ನಟ ವಿಜಯ್ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ರದ್ದುಗೊಳಿಸುವ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ದಕ್ಷಿಣ ರಾಜ್ಯಕ್ಕೆ ವಿನಾಯಿತಿ ಕೋರಿ ತಮಿಳುನಾಡು ಅಸೆಂಬ್ಲಿ ಕೇಂದ್ರ ಅರ್ಹತಾ ಪರೀಕ್ಷೆಯ ವಿರುದ್ಧ ಅಂಗೀಕರಿಸಿದ…

ಉಡುಪಿ: ಹೃದಯಾಘಾತದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಿಧನ

ಹತ್ತನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನರಾದ ಅಘಾತಕಾರಿ ಘಟನೆ ಮೂಡುಬೆಳ್ಳೆ ಬಳಿ ಜುಲೈ 3 ರಂದು ನಡೆದಿದೆ. ಮೃತರನ್ನು ಮೂಡುಬೆಳ್ಳೆಯ ಸೇಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಎಂದು ಗುರುತಿಸಲಾಗಿದೆ. ಮೃತರು ತಂದೆ ಪಳ್ಳಿದಡಬೆಟ್ಟು…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್ ಎಮ್ ಹಮೀದ್ ಬೆಳ್ಳಾರೆ ಆಯ್ಕೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್ ಎಮ್ ಹಮೀದ್ ಬೆಳ್ಳಾರೆ ಇವರು ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾನೂನು ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾಕ್ಟರ್‌ ಎ ಜೆ ಅಕ್ರಮ್ ಪಾಷಾರವರ ಶಿಫಾರಸಿನ…

ತುರ್ತು ರಕ್ತದ ಅವಶ್ಯಕತೆ ಇದ್ದಾಗ ರಕ್ತ‌ ದಾನ ಮಾಡಿ ಮಾದರಿಯಾದ ಯುವಕರು

ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ರಕ್ತ ದಾನ ಎಂಬ ಮಾತಿದೆ. ಹೀಗೆ ತುರ್ತು ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸುಳ್ಯದ ಇಬ್ಬರು ಯುವಕರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಸುಳ್ಯ ಮಂಡೆಕೋಲು‌ ನಿವಾಸಿ, ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರವತಿ ಎಂಬುವವರಿಗೆ ರಕ್ತದ ಅವಶ್ಯಕತೆ…

ತೊಡಿಕಾನ: ದೇವರ ಗುಂಡಿ ಜಲಪಾತಕ್ಕೆ ಪ್ರವಾಸಿಗರು ತೆರಳದಂತೆ ನಿಷೇಧಾಜ್ಞೆ ಸೂಚನಾ ಫಲಕ ಅಳವಡಿಕೆ

ಸುಳ್ಯ: ಮಳೆ ಅಬ್ಬರ ಎಲ್ಲಾ ಕಡೆ ಜೋರಾಗಿದ್ದು, ಹಲವು ಕಡೆ ಅನಾಹುತಗಳು ಮರುಕಳಿಸುತ್ತಿವೆ, ಈ ಹಿನ್ನಲೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೊಡಿಕಾನ ದೇವರ ಗುಂಡಿ ಜಲಪಾತಕ್ಕೆ ಮಳೆಗಾಲದಲ್ಲಿ ಪ್ರವಾಸಿಗರು ತೆರಳದಂತೆ, ದ. ಕ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಂಜಾಗೃತಾ ಕ್ರಮವಹಿಸಿ…

ಅಲ್ ರೌಂಡರ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೆರಿದ ಹಾರ್ದಿಕ್ ಪಾಂಡ್ಯ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾರ್ದಿಕ್ ಪಾಂಡ್ಯ(222 ರೇಟಿಂಗ್ ಅಂಕ) ಅವರು ನೂತನ ಐಸಿಸಿ ಟಿ20 ಆಲ್ರೌಂಡರ್ ಶ್ರೇಯಾಂಕದಲ್ಲಿ(T20I all-rounder) ಅಗ್ರಸ್ಥಾನಕ್ಕೇರಿದ್ದಾರೆ. ಈ ಬಾರಿಯ…

ದೇಶದಲ್ಲಿ ಅತಿ ಹೆಚ್ಚು ಲೈಕ್ ಸಿಕ್ಕ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೆ ನೋಡಿ.!

ಬರೋಬ್ಬರಿ 2 ಕೋಟಿ ಲೈಕ್ಸ್ ಬಾಚಿದ ಚೀಕು.! ಟಿ 20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ತಂಡ ಭಾರತೀಯರ ಮನಸನ್ನು ಗೆದ್ದಿದೆ. ಗೆಲುವಿನ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿವೆ. ಇದರ ನಡುವೆ ಕಿಂಗ್ ವಿರಾಟ್ ಕೊಹ್ಲಿ ಹಂಚಿಕೊಂಡಿರುವ…