
ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಹನೀಫ್ ಇ.ಆರ್. ಸಂಪಾಜೆ, ಹಮೀದ್ ಸಂಪಾಜೆ ಹಾಗೂ ಇಬ್ರಾಹಿಂ ದಂಡಕಜೆ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿ, ಅವರ ಯಾತ್ರೆ ಸುಖಕರವಾಗಲಿ, ಅಲ್ಲಾಹನ ಕೃಪೆ ಹಾಗೂ ಬರಕತ್ ಅವರಿಗೆ ಲಭಿಸಲಿ ಎಂದು ಹಾರೈಸಲಾಯಿತು.
ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾದ ಯುನಿಟ್ ಸದಸ್ಯರಾದ ಅರ್ಫಾಝ್ ಕೊಯನಾಡು ರವರನ್ನು ಅಭಿನಂದಿಸಿ, ಅವರ ಪರಿಶ್ರಮ ಮತ್ತು ಸಾಧನೆಯನ್ನು ಗೌರವಿಸಲಾಯಿತು.
ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಮಾಜದ ಭವಿಷ್ಯದ ಬೆಳಕುಗಳಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್, ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಹಮೀದಿಯಾ, ಸಂಪಾಜೆ ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್, ಎಂ ಜೆ ಎಂ ಕಲ್ಲುಗುಂಡಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಸಂಟ್ಯಾರ್, ಎ.ಕೆ. ಇಬ್ರಾಹಿಂ, ಎಸ್.ಕೆ. ಹನೀಫ್, ಝಕರಿಯಾ ಹೋನೆಸ್ಟ್, ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷ ಹಂಝ ಕೊಯನಾಡು, ಎಸ್ ವೈ ಎಸ್ ನಾಯಕರು ಫೈಝಲ್ ಝುಹ್ರಿ, ಲತೀಫ್ ಹೆಚ್.ಎ, ಝಾಕಿರ್ ಕೊಯನಾಡು, ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷ ಆಶಿಕ್ ಕೆ.ಎಚ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






