ಅರಂತೋಡು: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಅರಂತೋಡು ಫುಟ್ ಪಾಯಿಂಟ್ ಹೋಟೆಲ್ ಮಾಲಕ ಕರೀಂ ಪೈಚಾರ್ ಅವರಿಗೆ, ಅರಂತೋಡು ಕರೀಂ ಅಭಿಮಾನಿಗಳ ಬಳಗದ ವತಿಯಿಂದ ಜುಲೈ 4 ರಂದು ಬೀಳ್ಕೊಡಲಾಯಿತು.

ಅರಂತೋಡು ಬಿಜೆಎಂ ಜಮಾತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಅವರು ಕರೀಂ ಪೈಚಾರ್ ಅವರಿಗೆ ಶಾಲು ಹೊದಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಮೀಯ್ಯತ್ತುಲ್ ಫಲಾಹ್ ಮಾಜಿ ಅಧ್ಯಕ್ಷ ಕೆ.ಎಂ. ಅಬೂಬಕರ್ ಪಾರಕ್ಕಲ್, ತಾಜುದ್ದೀನ್ ಅರಂತೋಡು, ಸಿರಾಜ್ ಪೈಚಾರ್, ಝುಬೈರ್ ಶಾಂತಿನಗರ, ಮೊಯ್ದು ಕುಟ್ಟಿ, ಸಲಾವುದ್ದೀನ್ ಪಟೇಲ್, ಆಸಿಫ್ ಹಳೆಗೇಟು, ರಫೀಕ್ ಬಿ.ಎಂ., ಫಾಝಿಲ್ (ಪಲ್ಲು) ಸೇರಿದಂತೆ ಹಲವು ಗಣ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.







