More

ಮಾಜಿ ಸಚಿವ ರಮಾನಾಥ ರೈ ಯವರಿಗೆ 75 ನೇ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ

6 ಬಾರಿ ಶಾಸಕರಾಗಿ, ಅರಣ್ಯ, ಗೃಹ, ಸಾರಿಗೆ ಮೊದಲಾದ ಪ್ರಮುಖ ಖಾತೆಗಳ ಸಚಿವರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಗಿ, ಕೆಪಿಸಿಸಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಿಲ್ಲೆಯ ಹೆಮ್ಮೆಯ ಪುತ್ರ ಶ್ರೀ ಬಿ. ರಮಾನಾಥ ರೈ ಯವರಿಗೆ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಶುಭಾಶಯ ಕೋರಿದರುಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಶಾರದಾoಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು

Read More

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್‌ ಘಟಕದಿಂದ ಶಿಕ್ಷಕರ ದಿನಾಚರಣೆ; ಶಿಕ್ಷಕರು ಬದುಕಿನ ದಾರಿದೀಪ

ಸುಳ್ಯ: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಇತ್ತೀಚೆಗೆ ಕಾಲೇಜು ಷಷ್ಟ್ಯಬ್ದ ರಂಗಮಂದಿರದಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ನಿಜವಾದ ಹೆಮ್ಮೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದಾ ಗೌರವದಿಂದ ಸ್ಮರಿಸಬೇಕು. ಶಿಕ್ಷಕರ ಮೇಲಿನ ಗೌರವವು ಒಂದು ದಿನಕ್ಕೆ ಸೀಮಿತವಾಗದೆ ಸದಾ ಮುಂದುವರಿಯಬೇಕು […]

Read More

ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ.

ಸುಳ್ಯ , ಸ 13 : ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಇದರ ಜಂಟಿ ಆಶ್ರಯದಲ್ಲಿ , ಇಂಡಿಯನ್ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ್ರ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು , ಭಾನುವಾರ ಸುಣ್ಣಮೂಲೆ ಯಲ್ಲಿ ಯಶಸ್ವಿಯಾಗಿ ನಡೆಯಿತು. ಬಹು:ಸ್ವಾಲಿಹ್ ಹನೀಫಿ ಉಸ್ತಾದರ ದುಆ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಸಮಾಜದ ವಿವಿಧ ವರ್ಗದ ಜನರು ಉತ್ಸಾಹದಿಂದ ಭಾಗವಹಿಸಿ ಒಟ್ಟು 35 ಯೂನಿಟ್ ರಕ್ತ […]

Read More

ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಜ್ಜಗುತ್ತಿರುವ ಎನ್.ಎಂ.ಸಿ.ಯಲ್ಲಿ ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ ಚಾಂಪಿಯನ್ ಶಿಪ್

ಸೆ.18–19ರಂದು ಸುಳ್ಯದಲ್ಲಿ ಕ್ರೀಡಾ ಸಂಭ್ರಮ 40ಕ್ಕೂ ಅಧಿಕ ಕಾಲೇಜುಗಳಿಂದ ಕ್ರೀಡಾಪಟುಗಳು ಭಾಗವಹಿಸುವಿಕೆ ನಿರೀಕ್ಷೆ ಸುಳ್ಯ, ಸೆಪ್ಟೆಂಬರ್ 10:ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ 2026-27ನ್ನು ಸೆಪ್ಟೆಂಬರ್ 18 ಮತ್ತು 19ರಂದು ಆಯೋಜಿಸುತ್ತಿದೆ. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 40 ಕಾಲೇಜುಗಳ ತಂಡಗಳಳಿಂದ ಸುಮಾರು 230ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಈ ಪ್ರತಿಷ್ಠಿತ ಚಾಂಪಿಯನ್ಶಿಪ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯು ಯುವ […]

Read More

ಸುಳ್ಯ: ಸೆಪ್ಟೆಂಬರ್ 17 ರಂದು ‘ಕಾರ್ ಝೋನ್’ ಮಳಿಗೆಯ ಗ್ರ್ಯಾಂಡ್ ಓಪನಿಂಗ್ – ಗ್ರಾಹಕರಿಗೆ ಬಂಪರ್ ಆಫರ್!

ಸುಳ್ಯ: ವಾಹನ ಪ್ರಿಯರಿಗಾಗಿ ಕಾರು ಮತ್ತು ಬೈಕ್ ಆಕ್ಸೆಸರೀಸ್‌ಗಳ ಸಮಗ್ರ ಶ್ರೇಣಿಯನ್ನೊಳಗೊಂಡ ನೂತನ ಮಳಿಗೆ ‘ಕಾರ್ ಝೋನ್’ (Car Zone) ಸುಳ್ಯದ ಹಳೆಗೇಟು ಮೊಗರ್ಪಣೆ ಮಸೀದಿ ಸಮೀಪ ಸೆಪ್ಟೆಂಬರ್ 17, 2026 ರಂದು ಭವ್ಯವಾಗಿ ಉದ್ಘಾಟನೆಗೊಳ್ಳಲಿದೆ. ಆಕರ್ಷಕ ಉದ್ಘಾಟನಾ ಕೊಡುಗೆ: ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಸಲುವಾಗಿ ಸೆಪ್ಟೆಂಬರ್ 17 ರಿಂದ ನವೆಂಬರ್ 01, 2026 ರವರೆಗೆ ವಿಶೇಷ ಲಕ್ಕಿ ಕೂಪನ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ: ಲಭ್ಯವಿರುವ ಸೇವೆಗಳು ಹಾಗೂ ಪರಿಕರಗಳು ಸಂಪರ್ಕ ಹಾಗೂ ವಿಳಾಸ

Read More

ಸುಳ್ಯ: ಅಕ್ಟೋಬರ್ 3, 4ರಂದು ರಾಷ್ಟ್ರ ಮಟ್ಟದ ‘ಎ’ ಗ್ರೇಡ್ ಕಬಡ್ಡಿ ಮಹಾಸಂಗ್ರಾಮ – ಕಣಕ್ಕಿಳಿಯಲಿದ್ದಾರೆ ಖ್ಯಾತ ಪ್ರೊ ಕಬಡ್ಡಿ ತಾರೆಯರು!

ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ (ರಿ.) ಸುಳ್ಯ ತಾಲೂಕು ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ, ದೇಶದ ಮುಂಚೂಣಿ ಆಟಗಾರರನ್ನೊಳಗೊಂಡ ರಾಷ್ಟ್ರ ಮಟ್ಟದ ‘ಎ’ ಗ್ರೇಡ್ (National Level ‘A’ Grade) 12 ಆಹ್ವಾನಿತ ಪುರುಷ ತಂಡಗಳ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಮಹಾಸಂಗ್ರಾಮ “ಸುಳ್ಯ ಕಬಡ್ಡಿ ಉತ್ಸವ 2026” ಅಕ್ಟೋಬರ್ 03 ಮತ್ತು 04ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಲಿದೆ.ಅಮೆಚೂರು ಕಬಡ್ಡಿ ಫೆಡರೇಶನ್‌ ಆಫ್ ಇಂಡಿಯಾದ ಅಧಿಕೃತ ನಿಯಮಾವಳಿಗಳ ಪ್ರಕಾರ ನಡೆಯುವ […]

Read More

ಸುಳ್ಯ: ಸೆಪ್ಟೆಂಬರ್ 13ರಂದು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

ಸುಳ್ಯ: ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13, 2026ರ ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಮಾಧವ ಗೌಡ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನೆರವೇರಲಿದೆ.ಸಭೆಯ ಕಾರ್ಯಕ್ರಮಗಳು:

Read More

ಅರಂತೋಡು ಪದವಿ ಪೂರ್ವ ಕಾಲೇಜಿಗೆ ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೀಲಿಂಗ್ ಫ್ಯಾನ್ ಕೊಡುಗೆ

ಪಠೇಲ್ ಚಾರಿಟೇಬಲ್ ಟ್ರಸ್ಟ್ ಅರಂತೋಡು ಇದರ ವತಿಯಿಂದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ನಾಲ್ಕು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೆ.11 ರಂದು ನಡೆದ ಸರಳ ಸಮಾರಂಭದಲ್ಲಿ ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ಧೀನ್ ಪಠೇಲ್ ರವರು ಶಾಲಾ ಸಂಚಾಲಕ ಎ.ಸಿ. ವಸಂತ್ ರವರಿಗೆ ಪ್ಯಾನ್ ಗಳನ್ನು ಹಸ್ತಾಂತರಿಸಿದರು . ಈ ಸಂಧರ್ಭದಲ್ಲಿ ಪಠೇಲ್ ಟ್ರಸ್ಟ್ ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಠೇಲ್, ನಿರ್ದೇಶಕ ಸೈಫುದ್ದೀನ್ ಪಠೇಲ್ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ […]

Read More

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

ಸುವರ್ಣ ಸಂಭ್ರಮೋತ್ಸವಕ್ಕೆ ಕಾರ್ಯಯೋಜನೆ ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ(ರಿ.)ದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಡಾ. ಕೆ. ಟಿ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಬುಧವಾರದಂದು ನಡೆಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮತ್ತು ಉಪನ್ಯಾಸಕಿ ಸಿಂಧು ಭಾರದ್ವಾಜ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾಕಾರ್ಯಕ್ರಮದಲ್ಲಿ ನಿರ್ದೇಶಕರಾದ ಆನಂದ ಖಂಡಿಗರವರು ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರಾ ಎಂ. ಆರ್. ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರು ಸಂಘದ ಲೆಕ್ಕಪತ್ರದ […]

Read More

ಸುಳ್ಯ: ಜ್ವರದಿಂದ ಬಳಲುತ್ತಿದ್ದ ಜಯನಗರದ ಯುವಕ ಲೋಕೇಶ್ ನಿಧನ

ಸುಳ್ಯ, : ಜಯನಗರದ ನಿವಾಸಿ ಲೋಕೇಶ್ (36ವ) ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಲೋಕೇಶ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಅವರನ್ನು ಸುಳ್ಯದ ಖಾಸಗಿ ಜ್ಯೋತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಮೃತರು ತಂದೆ ಬಾಬು ಕೊಡಕೇರಿ, ತಾಯಿ ರುಕ್ಮಿಣಿ, ಸಹೋದರರಾದ ಹರೀಶ್ ಮತ್ತು ಕರುಣೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Read More