More

ಕಸ್ತೂರಿ ರಂಗನ್ ವರದಿ ಭೀತಿ: ವಿಧಾನಸೌಧದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಟಿ.ಎಂ. ಶಾಹಿದ್ ತೆಕ್ಕಿಲ್

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಯಿಂದ ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಕೃಷಿ ಭೂಮಿ, ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ತೀವ್ರ ತೊಂದರೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸಿದರು.ಕೇರಳ ಸರ್ಕಾರವು ಕಸ್ತೂರಿ […]

Read More

ಸುಳ್ಯ: ಹಜ್ ಯಾತ್ರಿಕರಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲೇ ವೈದ್ಯಕೀಯ ತಪಾಸಣೆ; ಫಿಟ್‌ನೆಸ್ ಪ್ರಮಾಣಪತ್ರ ಅಪ್ಲೋಡ್

ಸುಳ್ಯ: ಪ್ರಸಕ್ತ ಸಾಲಿನಲ್ಲಿ ಸುಳ್ಯ ತಾಲೂಕಿನಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ 40ಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಸುಳ್ಯದ ಸರ್ಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಯಶಸ್ವಿಯಾಗಿ ನಡೆಯಿತು. ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರೂ ನಿಗದಿತ ನಿಯಮಾವಳಿಯಂತೆ ಅಗತ್ಯ ಆರೋಗ್ಯ ತಪಾಸಣೆಗೆ ಒಳಗಾಗಿ, ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು (Medical Fitness Certificate) ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಸುಳ್ಯ ಸೇರಿದಂತೆ ಗ್ರಾಮೀಣ ಭಾಗದ ಯಾತ್ರಿಕರು ಈ ಪ್ರಮಾಣಪತ್ರ ಪಡೆಯಲು ಮಂಗಳೂರಿನ ಜಿಲ್ಲಾ […]

Read More

ಸುಳ್ಯ: ಸೆಪ್ಟೆಂಬರ್ 12ರಂದು ಶಾಂತಿನಗರದಲ್ಲಿ ‘ಅಲ್-ಫರಾಹ್ ಮೀಲಾದ್ ಫೆಸ್ಟ್ 2026’

ಸುಳ್ಯ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಹಾಗೂ ನೂರುಲ್ ಇಸ್ಲಾಂ ಮದ್ರಸ (2396) ವತಿಯಿಂದ ‘ಅಲ್-ಫರಾಹ್ ಮೀಲಾದ್ ಫೆಸ್ಟ್ 2026’ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 12ರಂದು ಶನಿವಾರ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ಜರುಗಲಿದೆ.ಅಂದು ಮಧ್ಯಾಹ್ನ 2:00 ಗಂಟೆಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ವೇಳಾಪಟ್ಟಿ:ಮಧ್ಯಾಹ್ನ 02:00 ಗಂಟೆಗೆ: ಮೌಲಿದ್ ಪಾರಾಯಣ ಕಾರ್ಯಕ್ರಮ.ಮಧ್ಯಾಹ್ನ 03:00 ಗಂಟೆಗೆ: ವಿದ್ಯಾರ್ಥಿಗಳ ಕಲಾ ಪ್ರತಿಭೆಗಳ ಪ್ರದರ್ಶನ ‘ಮಕ್ಕಳ ಪ್ರತಿಭಾ ಸಂಗಮ’.ಮಗ್ರಿಬ್ ನಮಾಜಿನ ನಂತರ: […]

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪದ್ಮರಾಜ್ ಪೂಜಾರಿ ನೇಮಕ

ಮಂಗಳೂರು, ಸೆ. 10: ರಾಜ್ಯಾದ್ಯಂತ 35 ಜಿಲ್ಲೆಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವನ್ನು ಎಐಸಿಸಿ ಪ್ರಕಟಿಸಿದೆ.ಹಿರಿಯ ಬಿಲ್ಲವ ನಾಯಕ ಪದ್ಮರಾಜ್ ಆರ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ದಕ್ಷಿಣ ಕನ್ನಡ (ದ.ಕ) ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಪೂಜಾರಿ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.ಸಂಘಟನ ಸೃಜನಾ ಅಭಿಯಾನ’ದ ಭಾಗವಾಗಿ, ಈ ನೇಮಕಾತಿಗಳನ್ನು ಮಾಡಲಾಗಿದೆ. ಅಭಿಯಾನದಡಿಯಲ್ಲಿ, ಪ್ರತಿ ಜಿಲ್ಲೆಗೆ ನಿಯೋಜಿಸಲಾದ ಎಐಸಿಸಿ ವೀಕ್ಷಕರು […]

Read More

ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್: ಗ್ರೀನ್ ವ್ಯೂ ಮತ್ತು ಕೆಪಿಎಸ್ ಸುಳ್ಯ ತಂಡಗಳಿಗೆ ಚಾಂಪಿಯನ್ ಪಟ್ಟ

ಸುಳ್ಯ: ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಗಾಂಧಿನಗರ ಕೆಪಿಎಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರ ಕ್ರೀಡಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಗ್ರೀನ್ ವ್ಯೂ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿವೆ. ರೋಚಕವಾಗಿ ಜರುಗಿದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಗ್ರೀನ್ ವ್ಯೂ ಪ್ರೌಢಶಾಲಾ ತಂಡವು ಸೈಂಟ್ ಜೋಸೆಫ್ ಪ್ರೌಢಶಾಲೆಯನ್ನು 1-0 ಗೋಲುಗಳ ಅಂತರದಿಂದ […]

Read More

ಮಲಪ್ಪುರಂ: ‘ಜಿನ್ ಬಾಳೆಹಣ್ಣು’ ವಿಡಿಯೋ ವೈರಲ್: ಇಸ್ಲಾಮಿಕ್ ವಿದ್ವಾಂಸರ ತೀವ್ರ ವಿರೋಧದ ಬೆನ್ನಲ್ಲೇ ನಕಲಿ ಕೇಂದ್ರಕ್ಕೆ ಸ್ಥಳೀಯರಿಂದ ಬೀಗ!

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ವಿವಾದ ಸೃಷ್ಟಿಸಿದ್ದ ಕೇರಳದ ಮಲಪ್ಪುರಂನ ‘ಜಿನ್ ಬಾಳೆಹಣ್ಣು’ ವಂಚನೆ ಪ್ರಕರಣ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ನಕಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಬೀಗ ಬಿದ್ದಿದೆ. ಧರ್ಮದ ಹೆಸರಿನಲ್ಲಿ ನಡೆದ ಈ ಬೂಟಾಟಿಕೆಯನ್ನು ಪ್ರಮುಖ ಇಸ್ಲಾಮಿಕ್ ವಿದ್ವಾಂಸರು ಕಟುವಾಗಿ ಖಂಡಿಸಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ರೊಚ್ಚಿಗೆದ್ದ ಸ್ಥಳೀಯರು ಕೇಂದ್ರಕ್ಕೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ತಿರುನಾವಾಯ ಸಮೀಪದ ಕೊಟಕ್ಕಲ್ ಬಂದರ್‌ಕಡವಿನಲ್ಲಿ ‘ಕಾಯಲ್‌ಪಟ್ಟಣಂ ಜಿನ್ ಮಹ್ಳರಾ’ ಎಂಬ ಹೆಸರಿನಲ್ಲಿ ಈ […]

Read More

ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ!

ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ! ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. […]

Read More

ಅರಂಬೂರು ಟರ್ಫ್‌ನಲ್ಲಿ ಜರ್ಸಿ ಬಿಡುಗಡೆ!;

ಅಕ್ಷಯ್ ಕೆ.ಸಿ. ಪ್ರಾಯೋಜಕತ್ವದಲ್ಲಿ SFC ಸುಳ್ಯ Under-15 ಆಟಗಾರರ ಜರ್ಸಿ ಬಿಡುಗಡೆ! ಸುಳ್ಯ: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ SFC ಸುಳ್ಯ ಫುಟ್‌ಬಾಲ್ ಕ್ಲಬ್ ತರಬೇತಿ ನೀಡುತ್ತಿರುವ 15 ವರ್ಷ ವಯೋಮಾನದ (Under-15) ಆಟಗಾರರ ಹೊಸ ಜರ್ಸಿ ಬಿಡುಗಡೆ ಸಮಾರಂಭವು ಅರಂಬೂರಿನ ಟರ್ಫ್ ಮೈದಾನದಲ್ಲಿ ವಿಜ್ರಂಭಣೆಯಿಂದ ನೆರವೇರಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ಅಕ್ಷಯ್ ಕೆ.ಸಿ. ಅವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿ ಜರ್ಸಿ ಬಿಡುಗಡೆಗೊಳಿಸಿದರು. “ಚಾಯ್ ಚರ್ಚೆ”ಯಿಂದ ರೂಪುಗೊಂಡ […]

Read More

ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ! ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ!

ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. “Nurturing Faith, Building Future” ಎಂಬ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು […]

Read More

ಗ್ರಾಮೀಣ LPG ಗ್ರಾಹಕರಿಗೆ ಬಿಗ್ ರಿಲೀಫ್: ಇನ್ಮುಂದೆ 25 ದಿನಕ್ಕೊಮ್ಮೆ ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಅವಕಾಶ!

ಅರಂತೋಡು/ಸುಳ್ಯ: ಗ್ರಾಮೀಣ ಭಾಗದ ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತು ಗ್ಯಾಸ್ ಏಜೆನ್ಸಿಗಳು ಸಿಹಿ ಸುದ್ದಿ ನೀಡಿದ್ದು, ಇನ್ಮುಂದೆ ನಗರ ಪ್ರದೇಶಗಳ ಮಾದರಿಯಲ್ಲೇ ಪ್ರತಿ 25 ದಿನಗಳಿಗೊಮ್ಮೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ಯಾಸ್ ಬುಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿತ್ತು. ಆದರೆ, ಪ್ರಸ್ತುತ ಅನಿಲ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿದ್ದು, ಯಾವುದೇ ಕೊರತೆ ಇಲ್ಲದಿರುವುದರಿಂದ ಈ […]

Read More