ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರದಲ್ಲಿ ಶುಭಾರಂಭ

ನಿಮ್ಮ ವಾಹನದ ಎಲ್ಲಾ ರೀತಿಯ ಇನ್ಸೂರೆನ್ಸ್ ಅತೀ ಕಡಿಮೆ ದರದರಲ್ಲಿ ಮಾಡಿಕೊಡಲು ಶುಭಾರಂಭಗೊಂಡಿದೆ, ದಿ ಏಜೆಂಟ್ ಪ್ಲಸ್ ಡಿಜಿಟಲ್ ಇನ್ಸೂರೆನ್ಸ್ ಕುಂಬ್ರ. ಇಲ್ಲಿ ಆಟೋರಿಕ್ಷಾ, ಪಿಕಪ್, ಲಾರಿ, ಬೈಕ್, ಖಾಸಗಿ ರೀತಿಯ ಇತರೇ ಎಲ್ಲಾ ವಾಹನಗಳಿಗೆ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ…

ರಕ್ತನಿಧಿ ಕೇಂದ್ರಗಳಲ್ಲಿ ನಿಗದಿಪಡಿಸಿದ ರಕ್ತ ಪರೀಕ್ಷಾ ವೆಚ್ಚ ದಿಢೀರ್ ಹೆಚ್ಚಳ ಕಡಿತಗೊಳಿಸುವಂತೆ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ

ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕ್‌ಗಳಲ್ಲಿ ರೋಗಿಗಳಿಗೆ ಅವಶ್ಯಕತೆಗನುಸಾರವಾಗಿ ಪೂರೈಸಲಾಗುವ ರಕ್ತಗಳಿಗೆ ಈಗಾಗಲೇ ಪರೀಕ್ಷಾ ಮತ್ತು ಪರಿಶೀಲನಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ರೋಗಿಗಳೇ ಭರಿಸುತ್ತಿದ್ದಾರೆ. ರಕ್ತ ವಿಂಗಡಣೆ ಪ್ರಕ್ರಿಯೆಗಳಾದ ಪ್ಲಾಸ್ಟಾ, ಪ್ಲೇಟ್ಲೇಟ್ ಮತ್ತು ಕ್ರಯೋ ಹೀಗೇ ಪ್ರತಿಯೊಂದಕ್ಕೂ ಬ್ಲಡ್ ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ…

ಸುಳ್ಯ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಂದ ಜೂ.18 ರಂದು ಜಿಲ್ಲಾ ಪಂಚಾಯತ್ ಸುಳ್ಯ ಉಪವಿಭಾಗ ಕಾರ್ಯಾಲಯ ಉದ್ಘಾಟನೆ

ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ನಿಯೋಗದಿಂದ ಪೂರ್ವತಯಾರಿ ಬಗ್ಗೆ ಪರಿಶೀಲನೆ ಜೂ. 18 ರಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ದ. ಕ ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ರವರು ಸುಳ್ಯದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೇರವಾರಿಸಲಿರುವ ಹಿನ್ನೆಲೆಯಲ್ಲಿ…

ಪೆರಾಜೆ: ಹಿಟ್ ಆ್ಯಂಡ್ ರನ್; ಗಾಯಗೊಂಡ ಯುವತಿ, ಆಸ್ಪತ್ರೆಗೆ ದಾಖಲು

ಸುಳ್ಯದಿಂದ ಪೆರಾಜೆ ಕಡೆಗೆ ಯುವತಿಯೊಬ್ಬಳು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ವಾಹನ ವೊಂದು ಢಿಕ್ಕಿಯಾಗಿ, ಪರಿಣಾಮ ಯುವತಿ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಪೆರಾಜೆಯ ಶಾಹಿದಾ ಎಂಬವರು ಸುಳ್ಯದಿಂದ ಪೆರಾಜೆಯ ತಮ್ಮ ಮನೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಅರಂಬೂರು ಮರದ…

ಕಾಸರಗೋಡು: ಪ್ರವಾಹಕ್ಕೆ ಸಿಲುಕಿ 7 ವರ್ಷದ ಬಾಲಕ ಮೃತ್ಯು

Kasaragod: ಬಾಲಕನೋರ್ವ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬಂದ್ಯೋಡು ಸಮೀಪದ ಕೊಕ್ಕೆಜಾಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಕೊಕ್ಕೆಜಾಲ್ ನ ಸಾದತ್ ಎಂಬುವವರ ಪುತ್ರ ಸುಲ್ತಾನ್ (7) ಮೃತಪಟ್ಟ ಬಾಲಕ. ಮನೆ ಸಮೀಪ ಆಟವಾಡುತ್ತಿದ್ದ ಸುಲ್ತಾನ್ ನಾಪತ್ತೆಯಾಗಿದ್ದನು. ಇದರಿಂದಾಗಿ ಮನೆಯವರು…

ಅಡ್ಕಾರು: ನಿಯಂತ್ರಣ ತಪ್ಪಿ ಪಲ್ಟಿಯಾದ ಡಸ್ಟರ್ ಕಾರು..! ಅದೃಷ್ಟವಶಾತ್ ಪ್ರಯಾಣಿಕರು  ಪ್ರಾಣಾಪಾಯದಿಂದ ಪಾರು..!

ಅಡ್ಕಾರಿನಲ್ಲಿ ಡಸ್ಟರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು(ಜೂ.16) ನಡೆದಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯದ ಹಲವು ಭಾಗಗಳಲ್ಲಿ ನಾಳೆ(ಜೂ17) ವಿದ್ಯುತ್ ವ್ಯತ್ಯಯ

110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ದಿನಾಂಕ: 17.06.2025 (ಮಂಗಳವಾರ) ಪೂರ್ವಾಹ್ನ 10:00 ರಿಂದ ಸಾಯಂಕಾಲ 3:00 ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು – ಸುಳ್ಯ ವಿದ್ಯುತ್ ಮಾರ್ಗಗಳ…

ದ.ಕ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲೆಗಳಿಗೆ (ಇಂದು ಜೂ.16) ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಂಗಳೂರು, ಬಂಟ್ವಾಳ, ಉಳ್ಳಾಲ ಹಾಗೂ ಮೂಡುಬಿದಿರೆ, ಮೂಲ್ಕಿ, ಪುತ್ತೂರು, ಸುಳ್ಯ ಸೇರಿದಂತೆ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು ಗಳಿಗೆ ಜೂ.16 ರಂದು ರಜೆ ಘೋಷಣೆ ಮಾಡಲಾಗಿದೆ.

ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಮಾಡಿದ ಯುವಕ ಇವನೇ

ಗುಜರಾತ್ ನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಏರ್ ಇಂಡಿಯಾ ದುರಂತದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು. ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ರಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10…

ದಕ ಜಿಲ್ಲೆಯ ಹಲವು ತಾಲೂಕುಗಳಿಗೆ (ನಾಳೆ ಜೂ.16) ರಜೆ

ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಂಗಳೂರು, ಬಂಟ್ವಾಳ, ಉಳ್ಳಾಲ ಹಾಗೂ ಮೂಡುಬಿದಿರೆ, ಮೂಲ್ಕಿ ತಾಲೂಕಿನ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜೂ.16 ರಂದು ರಜೆ ಘೋಷಣೆ ಮಾಡಲಾಗಿದೆ.