ಪೈಚಾರ್ ಪರಿಸರದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ; ಆತಂಕದಲ್ಲಿ ಸಾರ್ವಜನಿಕರು
ಪೈಚಾರ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗುವಾಗ ಸಾರ್ವಜನಿಕರು ನಡೆದಾಡುವ ವೇಳೆ ನಾಯಿಗಳು ದಾಳಿ ನಡೆಸುತ್ತಿವೆ. ಈಗಾಗಲೇ ಐದಾರು ಮಂದಿ ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಸಂಗಕೂಡ ನಡೆದಿದೆ. ಪೈಚಾರ್ ಬಸ್…
ಸಸಿಹಿತ್ಲು ಸಮುದ್ರ ತೀರದಲ್ಲಿ ನೀರುಪಾಲಾದ ಯುವಕ
ಸುರತ್ಕಲ್ ಅಗಸ್ಟ್ 25:ಸಸಿಹಿತ್ಲು ಸಮುದ್ರ ತೀರದಲ್ಲಿ ಈಜಾಡಲು ನೀರಿಗಳಿದ ನಾಲ್ವರು ಮಂದಿಯ ಪೈಕಿ ಓರ್ವ ಯುವಕ ಸಾವನಪ್ಪಿ, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ನಿನ್ನೆ ಸಂಜೆ ವರದಿಯಾಗಿದೆ.ಮೃತರನ್ನು ಪಡುಪಣಂಬೂರು ಕಜಕತೋಟ ನಿವಾಸಿ ದಿ. ಅನ್ವರ್ ಎಂಬವರ ಪುತ್ರ ಮುಹಮ್ಮದ್ ಸಮೀರ್…
ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ `ಚೇತೇಶ್ವರ ಪೂಜಾರ’
ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಚೇತೇಶ್ವರ್ ಪೂಜಾರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚೇತೇಶ್ವರ ಪೂಜಾರ ಅವರು ಭಾರತೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ಪ್ರತಿ…
ಚುನಾವಣಾ ರಾಜಕೀಯಕ್ಕೆ ಕೇಂದ್ರ ಸಚಿವ ‘ವಿ.ಸೋಮಣ್ಣ’ ಗುಡ್ ಬೈ.!
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ಆ ದೇವರು ಬಂದು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೂ ನಾನು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನನ್ನ ಭಾವನೆ ಅದೇ ರೀತಿಯಲ್ಲಿದೆ. ಅಧಿಕಾರವಿದ್ದಾಗ…
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವ ನಾಳೆ
ಸುಳ್ಯ: ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವ ಈ ಬಾರಿ ಸುಳ್ಯ ಸೆಕ್ಟರ್ ಮಟ್ಟದಲ್ಲಿ ನಾಳೆ (2025 ಆಗಸ್ಟ್ 24, ಭಾನುವಾರ) ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿದೆ. ಸುಮಾರು 100 ಕ್ಕೂ ಹೆಚ್ಚು…
ಕಲ್ಲುಗುಂಡಿಯಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಎಸ್ಕೇಪ್ ಆದ ಟಿ.ಟಿ ವಾಹನ; ಸುಳ್ಯದಲ್ಲಿ ತಡೆಹಿಡಿದು ಪೊಲೀಸ್ ವಶಕ್ಕೆ
ಕಲ್ಲುಗುಂಡಿ: ಟಿ.ಟಿ ವಾಹನವೊಂದು ಕಲ್ಲುಗುಂಡಿ ಬಳಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು (ಹಿಟ್ & ರನ್) ನಿಲ್ಲಿಸದೇ ಪರಾರಿಯಾಗಲೆತ್ನಿಸಿದಾಗ, ಸುಳ್ಯದಲ್ಲಿ ಅಡ್ಡಗಟ್ಟಿ ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಲ್ಲುಗುಂಡಿಯಲ್ಲಿ ಆ.23 ರಂದು ರಾತ್ರಿ 9.30 ರ ವೇಳೆಗೆ…
ಈಶ್ವರಮಂಗಲ: ಆ.24 ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ರವರಿಂದ ಬೃಹತ್ ಹುಬ್ಬುರ್ರಸೂಲ್ ಪ್ರಭಾಷಣ
ವಿಶ್ವಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಲೋಕ ಮುಸ್ಲಿಮರು ಸಜ್ಜಾಗಿದ್ದಾರೆ. ಪುಣ್ಯ ಪ್ರವಾದಿಯರ ಜನ್ಮದಿನದಿಂದ ಅನುಗ್ರಹೀತಗೊಂಡ ಪುಣ್ಯ ರಬೀಉಲ್ ಅವ್ವಲ್ ತಿಂಗಳ ಆಗಮನವಾಗುತ್ತಿದೆ. ನಾಳೆ ಆಗಸ್ಟ್ 24 ರಂದು ಆದಿತ್ಯವಾರ ಮಗ್ರಿಬ್…
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಆರಂಭ!
ಬೆಂಗಳೂರು: ಪ್ರಯಾಣಿಕರ ನೆಚ್ಚಿನ ಬೈಕ್ ಟ್ಯಾಕ್ಸಿ ಸೇವೆಗೆ (Bike Taxi) ಸರ್ಕಾರ ಕೆಲ ತಿಂಗಳ ಹಿಂದೆಯಷ್ಟೇ ನಿಷೇಧ ಹೇರಿತ್ತು. ಆ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸವಾರರಿಂದ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ರಾಜ್ಯದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ, ಇಂದಿನಿಂದ…
ಬೈತಡ್ಕ: ಸಜ್‌ಲಾ ಇಸ್ಮಾಯಿಲ್ ರಿಗೆ ಸನ್ಮಾನ ಮತ್ತು ಕುರಾನ್ ಪ್ರದರ್ಶನ ಕಾರ್ಯಕ್ರಮ
ಬೈತಡ್ಕ: ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ವತಿಯಿಂದ ಮಷಿ ಹಾಗೂ ಕಲಂ ಬಳಸಿ ಬರಹ ಮೂಲಕ ಪರಿಶುದ್ಧ ಕುರಾನಿನ 30 ಕಾಂಡ ಗಳನ್ನು ಬರೆದು ಅಧ್ಬುತ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಸಜ್‌ಲಾ ಇಸ್ಮಾಯಿಲ್ ಬೈತಡ್ಕ ರವರ…
ಕೊಯನಾಡು: ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮದ ಲೋಗೋ ಬಿಡುಗಡೆ
ಕೊಯನಾಡು ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮದ ಲೋಗೋ ಬಿಡುಗಡೆ ಸಮಾರಂಭ ಆಗಸ್ಟ್ 22 ರಂದು ಜುಮಾ ನಮಾಝ್ ಬಳಿಕ ಮದ್ರಸ ವಠಾರದಲ್ಲಿ ಜರುಗಿತು. ಕಾರ್ಯಕ್ರಮದ ಲೋಗೋಗೆ “ರೂಹೀ ಫಿದಾಕ” ಎಂದು ಹೆಸರು ಇಡಲಾಗಿದ್ದು, ಲೋಗೋವನ್ನು ಜಮಾಅತ್ ಅಧ್ಯಕ್ಷರಾದ ಹಾಜಿ…
