ಸುಳ್ಯ, ಆ 6: ಕಾಯರ್ತೋಡಿ ವಾರ್ಡಿನ ಬೋರುಗುಡ್ಡೆಯಲ್ಲಿ ಸಂಪೂರ್ಣ ಹದಗೆಟ್ಟು ಕೆಸರುಮಯವಾಗಿದ್ದ ರಸ್ತೆಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ನಗರ ಪಂಚಾಯತ್ ಮುಖ್ಯಾಧಿಕಾರಿಗೆ SDPI ವತಿಯಿಂದ ಇಂದು ಬೆಳಗ್ಗೆ ಮನವಿ ನೀಡಲಾಗಿತ್ತು, ಆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಮಧ್ಯಾಹ್ನದ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಸ್ಡಿಪಿಐ ನಾಯಕರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಈ ತ್ವರಿತಗತಿಯ ಕಾರ್ಯವೈಖರಿ ಸ್ಥಳೀಯರಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಸುಳ್ಯ ಬ್ಲಾಕ್ ಸಮಿತಿಯ ಕಾರ್ಯದರ್ಶಿ ಸುಹೈಲ್ ಸುಳ್ಯ, ಬೋರುಗುಡ್ಡೆ ಬ್ರಾಂಚ್ ಸಮಿತಿಯ ಕಾರ್ಯದರ್ಶಿ ಸಾಜೀದ್ ಬೋರು ಗುಡ್ಡೆ , ಅಬ್ದುಲ್ಲಾ ಅದ್ದು, ರಹೀಂ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು