ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಹಾಗೂ ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಜ್ಞಾನದೀಪದ ಮಣ್ಣಿನಲ್ಲಿ ಬೃಹತ್ ಕ್ರೀಡಾ ಹಬ್ಬವೊಂದು ನಡೆಯಲಿದ್ದು, ಜನವರಿ 24ರಂದು (ನಾಳೆ) ರಾಷ್ಟ್ರಮಟ್ಟದ 21 ಕಿ.ಮೀ. ಓಟದ “ಸುಳ್ಯ ಹಾಫ್ ಮ್ಯಾರಥಾನ್” ಕೆ.ವಿ.ಜಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಮ್ಯಾರಥಾನ್‌ಗೆ ಬೆಳಿಗ್ಗೆ 5:00 ಗಂಟೆಗೆ ಚಾಲನೆ ದೊರೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 5.5 ಲಕ್ಷ ರೂಪಾಯಿ ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸ್ಪರ್ಧೆಯ ಪ್ರಮುಖಾಂಶಗಳು:

  • ದಿನಾಂಕ: 24.01.2026 (ಶನಿವಾರ)
  • ಸಮಯ: ಬೆಳಿಗ್ಗೆ 5:00 ಗಂಟೆಗೆ
  • ಸ್ಥಳ: ಕೆ.ವಿ.ಜಿ ಕ್ರೀಡಾಂಗಣ, ಸುಳ್ಯ

ವಿಭಾಗಗಳು ಮತ್ತು ಬಹುಮಾನಗಳು:

ಈ ಮ್ಯಾರಥಾನ್‌ನಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು, ವಯೋಮಿತಿಗನುಗುಣವಾಗಿ (18-35, 36-49, ಮತ್ತು 50 ವರ್ಷ ಮೇಲ್ಪಟ್ಟವರು) ಸ್ಪರ್ಧೆಗಳು ನಡೆಯಲಿವೆ. ಇದಲ್ಲದೆ 18 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 10 ಕಿ.ಮೀ ಮತ್ತು 5 ಕಿ.ಮೀ ಓಟ ಹಾಗೂ ಪುರುಷ ಮತ್ತು ಮಹಿಳೆಯರಿಗೆ 3 ಕಿ.ಮೀ ‘ಗಮ್ಮತ್ ರನ್’ ಆಯೋಜಿಸಲಾಗಿದೆ.

​ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲದೆ, ನಾಲ್ಕನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗಿನ ವಿಜೇತರಿಗೂ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಟೀ-ಶರ್ಟ್, ಉಪಾಹಾರದ ವ್ಯವಸ್ಥೆ ಹಾಗೂ ಪದಕಗಳನ್ನು (Finishers Medal) ನೀಡಲಾಗುತ್ತದೆ.

​ಸುಳ್ಯದ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ

Leave a Reply

Your email address will not be published. Required fields are marked *