
ಕೊಯನಾಡು: ಇಂದು ಮೇ 07 ರಂದು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಕೊಯನಾಡಿನಲ್ಲಿ 29ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಪ್ರಭಾಷಣಗಾರರಾಗಿ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಮುದುಗುಡ ಅವರು ಭಾಷಣ ಮಾಡಲಿದ್ದಾರೆ. ಸ್ವಲಾತ್ ಹಾಗೂ ದುಆ ಮಜ್ಲಿಸ್‌ಗೆ ಸಯ್ಯದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ನೇತೃತ್ವ ನೀಡಲಿದ್ದಾರೆ.
ಕಾರ್ಯಕ್ರಮವನ್ನು ಜುಮ್ಮಾ ಮಸೀದಿ ಖತೀಬ್ ಅಲ್ ಹಾಜ್ ಸಿದ್ದೀಕ್ ಝುಹ್ರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್. ಮೊಯಿದಿನ್ ಕುಂಞಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಉಮರಾ, ಉಲಮಾ ಹಾಗೂ ಸಾಮಾಜಿಕ-ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್.ಪಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






